ಕರ್ನಾಟಕ

karnataka

ETV Bharat / state

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿ, ಚೇತರಿಸಿಕೊಂಡ್ರೂ ಆತ್ಮಹತ್ಯೆ ಮಾಡಿಕೊಂಡ ಪತ್ನಿ - ಕೋವಿಡ್​ನಿಂದ ಆತ್ಮಹತ್ಯೆ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಮಧ್ಯೆ ಜನರು ಭಯದಿಂದಲೇ ಜೀವ ಕಳೆದಕೊಳ್ಳುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಕರ್ನಾಟಕದಲ್ಲಿ ಕೊರೊನಾ ವರದಿ,ಕರ್ನಾಟಕದಲ್ಲಿ ಕೋವಿಡ್ ವರದಿ,ಕರ್ನಾಟಕದಲ್ಲಿ ಲಾಕ್​ಡೌನ್,ಭಾರತದಲ್ಲಿ ಕೋವಿಡ್,ಕರ್ನಾಟಕ ಕೊರೊನಾ ಅಪ್​ಡೇಟ,

corona death
corona death

By

Published : Apr 30, 2021, 7:51 PM IST


ಚಾಮರಾಜನಗರ:ಕೊರೊನಾ ಸೋಂಕಿನಿಂದ ಪತಿ ಚೇತರಿಸಿಕೊಳ್ಳದಿರುವುದರಿಂದ ಮನನೊಂದ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ದೇಸಿಗೌಡನಪುರ ಗ್ರಾಮದಲ್ಲಿ ನಡೆದಿದೆ‌.

ದೇಸಿಗೌಡನಪುರ ಗ್ರಾಮದ 64 ವರ್ಷದ ವೃದ್ಧೆ ಆತ್ಮಹತ್ಯೆ ಮಾಡಿಕೊಂಡವರು. ಮೃತರ ಪತಿಗೆ 70 ವರ್ಷ ವಯಸ್ಸಾಗಿದ್ದು, ಕಳೆದ 7 ದಿನಗಳ ಹಿಂದೆ ಈ ದಂಪತಿಗೆ ಸೋಂಕು ದೃಢಪಟ್ಟು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಪತ್ನಿ ಚೇತರಿಕೆ ಕಂಡು ಗುರುವಾರ ಆಸ್ಪತ್ರೆಯಿಂದ ಹಿಂತಿರುಗಿ ಹೋಂ ಐಸೋಲೇಷನ್​ನಲ್ಲಿದ್ದರು.‌ ಆದರೆ, ಪತಿ ಚೇತರಿಕೆ ಕಾಣದಿದ್ದರಿಂದ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿರುವ ಮಾಹಿತಿಯಿಂದ ಹೆದರಿ ನೇಣಿಗೆ ಶರಣಾಗಿದ್ದಾರೆ ಎಂದು ಜಿಪಂ‌ ಸದಸ್ಯ ಕೆರೆಹಳ್ಳಿ ನವೀನ್ ತಿಳಿಸಿದ್ದಾರೆ.

ಮೃತರ ಅಂತ್ಯಸಂಸ್ಕಾರವನ್ನು ಕೆರೆಹಳ್ಳಿ ನವೀನ್ ಮತ್ತು ತಂಡ ಕೋವಿಡ್ ನಿಯಮಾನುಸಾರ ನಡೆಸಿದ್ದಾರೆ.

ABOUT THE AUTHOR

...view details