ಕರ್ನಾಟಕ

karnataka

ETV Bharat / state

ತಪ್ಪಿತಸ್ಥರು ಯಾರೇ ಆದರೂ ಸಹ ಶಿಕ್ಷೆ ಖಚಿತ.. ಸಚಿವ ಎಸ್ ಟಿ ಸೋಮಶೇಖರ್ - drugs case

ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆದರೂ ಸಹ ಶಿಕ್ಷೆ ಆಗುತ್ತೆ. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಎಲ್ಲರೂ ಸಮಾನರು..

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

By

Published : Sep 11, 2020, 6:49 PM IST

Updated : Sep 11, 2020, 7:50 PM IST

ಕೊಳ್ಳೇಗಾಲ :ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ, ಅದರ ಬಣ್ಣ ಬದಲಾಗುತ್ತಿದೆ. ಈ ಪ್ರಕರಣದಲ್ಲಿ ಅವರು ‌ಇವರು ಅಂತಾ ಬೇಧವಿಲ್ಲ. ತಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುತ್ತೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ತಪ್ಪಿತಸ್ಥರು ಯಾರೇ ಆದರೂ ನಾವು ಬಿಡುವುದಿಲ್ಲ. ಕೆಲ ಶಾಸಕರು ಮತ್ತು ಅವರ ಮಕ್ಕಳ ಹೆಸರುಗಳು ಸಹ ಕೇಳಿ ಬರುತ್ತಿವೆ. ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆದರೂ ಸಹ ಶಿಕ್ಷೆ ಖಂಡಿತ. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಎಲ್ಲರೂ ಸಹ ತಲೆಬಾಗಲೇಬೇಕು ಎಂದರು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್

ನಾಡಹಬ್ಬ ದಸರಾ ಚಾಲನೆಗೆ ಕೋವಿಡ್-19 ವಿರುದ್ಧ ಹೋರಾಟ ನಡೆಸಿದ ಆಶಾ ಕಾರ್ಯಕರ್ತೆಯರು, ವೈದ್ಯರು, ಪೌರಕಾರ್ಮಿಕರು, ಪೊಲೀಸರು, ನರ್ಸ್​ಗಳ ಹೆಸರನ್ನು ಈಗಾಗಲೇ ಸೂಚಿಸಿದ್ದೇವೆ. ಈ ಬಗ್ಗೆ ಮೈಸೂರಿನಲ್ಲಿ ಶನಿವಾರ ಸಭೆ ನಡೆಯುತ್ತದೆ. ನಂತರ ಮಾಹಿತಿ ಹೇಳುತ್ತೇನೆ ಎಂದರು.

ಹೆಚ್ ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನವನ್ನು ನೀಡುವ ಅಧಿಕಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೈಯಲ್ಲಿದೆ. ಅದು ಸಚಿವರ ಕೈಯಲ್ಲಿ ಇರುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Last Updated : Sep 11, 2020, 7:50 PM IST

ABOUT THE AUTHOR

...view details