ಕರ್ನಾಟಕ

karnataka

ETV Bharat / state

ಚಾಮರಾಜನಗರ ಮತದಾರನ ಸರ್ಜಿಕಲ್ ಸ್ಟ್ರೈಕ್ ಯಾರ ಮೇಲೆ ? - ಕಾಂಗ್ರೆಸ್

ಸಂಸದ ಧ್ರುವನಾರಾಯಣ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ ಗುಡುಗಿದ್ದರು. ವಿಶ್ರೀ ವಿರುದ್ಧ ಮತದಾರರೇ ಈ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ ಎಂದು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಎದಿರೇಟು ನೀಡಿದ್ದರು. ಈ ಮೂಲಕ ಚುನಾವಣಾ ಕಣಕ್ಕೆ ರಂಗು ತಂದಿದ್ದರು.

ಚಾಮರಾಜನಗರ

By

Published : May 21, 2019, 8:38 PM IST

ಲೋಕಸಭಾ ಚುನಾವಣೆ ಮುಗಿದು ಮತ ಎಣಿಕೆಯ ಹೊಸ್ತಿಲಲ್ಲಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ‌. ಇಲ್ಲಿ ಹಳೇ ಹುಲಿ ಶ್ರೀನಿವಾಸ್ ಪ್ರಸಾದ್​ ಗೆಲ್ತಾರಾ ಇಲ್ಲವೇ ಧ್ರುವನಾರಾಯಣ ಹ್ಯಾಟ್ರಿಕ್​ ಬಾರಿಸ್ತಾರಾ ಅನ್ನೋದು ಇನ್ನೇನು ಎರಡೇ ದಿನದಲ್ಲಿ ಗೊತ್ತಾಗಲಿದೆ.

ಎರಡೂ ಪಕ್ಷಗಳಿಗೆ ಗೆಲುವಿನ ವಿಶ್ವಾಸ.. ಯಾರ ಕಡೆ ಮತದಾರನ ಒಲವು!

ಚಾಮರಾಜನಗರ ಮತದಾರನ ಸರ್ಜಿಕಲ್ ಸ್ಟ್ರೈಕ್ ಯಾರ ಮೇಲೆ ?

ಸಂಸದ ಧ್ರುವನಾರಾಯಣ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ ಗುಡುಗಿದ್ದರು. ವಿಶ್ರೀ ವಿರುದ್ಧ ಮತದಾರರೇ ಈ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ ಎಂದು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ ಎದಿರೇಟು ನೀಡಿದ್ದರು. ಈ ಮೂಲಕ ಚುನಾವಣ ಕಣಕ್ಕೆ ರಂಗು ತಂದಿದ್ದರು. ಮತದಾರ ತಮ್ಮ ಪರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾನೆ ಎಂಬುದು ಎರಡೂ ಪಕ್ಷಗಳ ವಿಶ್ವಾಸ.

ಇದು ಕಾಂಗ್ರೆಸ್ ಭದ್ರಕೋಟೆ, ಬಿಜೆಪಿ ಅರಳಿಸುತ್ತಾ ಕಮಲ ?

ಚಾಮರಾಜನಗರ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು 11 ಬಾರಿ ಕಾಂಗ್ರೆಸ್ ವಿಜಯಶಾಲಿಯಾಗಿದೆ. ಈ ಹಿಂದೆ ಕಾಂಗ್ರೆಸ್ ನಿಂದಲೇ 4 ಬಾರಿ ವಿ.ಶ್ರೀನಿವಾಸಪ್ರಸಾದ್ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಈವರೆಗೂ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ ಒಂದು ವೇಳೆ ವಿ.ಶ್ರೀ ಗೆದ್ದರೇ ಮೊದಲ ಬಾರಿಗೆ ಗಡಿಜಿಲ್ಲೆಯಲ್ಲಿ ಕಮಲ ಅರಳಿದಂತಾಗಲಿದೆ.

ದಾಖಲೆ ಮತದಾನದ ಫಲ ಯಾರಿಗೆ!?

ಈ ಚುನಾವಣೆಯಲ್ಲಿ ಶೇ.75.22 ರಷ್ಟು ಮತದಾನವಾಗಿದ್ದು, 16,86,023 ಮತದಾರರಲ್ಲಿ 12,68,173 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.82.59 ರಷ್ಟು ಮತದಾನವಾಗಿದೆ. ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.68.94 ರಷ್ಟು ಮತದಾನವಾಗಿದೆ. ಎಚ್‌ಡಿ ಕೋಟೆ ಹಾಗೂ ವರುಣದಲ್ಲಿ ಕಾಂಗ್ರೆಸ್ ಬಾಹುಳ್ಯವಿದ್ದು ಗುಂಡ್ಲುಪೇಟೆ, ಚಾಮರಾಜನಗರ ಬಿಜೆಪಿಯ ಶಕ್ತಿ ಕೇಂದ್ರವಾಗಿದೆ. ದಾಖಲೆಯ ಮತದಾನದ ಪಾಲು ಎರಡೂ ಪಕ್ಷಗಳು ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

ಇಬ್ಬರಿಗೂ ಗೆಲುವಿನ ವಿಶ್ವಾಸ

ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಕಳೆದ ಬಾರಿ ಮೋದಿ ಅಲೆ ನಡುವೆಯೂ ಜಯಿಸಿದ್ದ ಆರ್. ಧ್ರುವನಾರಾಯಣ್ ಈ ಬಾರಿಯೂ ಗೆಲುವಿನ ನಗೆ ಬೀರಲಿದ್ದಾರೆಂಬುದು ಕೈಪಡೆ ವಿಶ್ವಾಸ. ಇನ್ನು 40-50 ಸಾವಿರ ಮತಗಳ ಅಂತರದಿಂದ ಶ್ರೀನಿವಾಸಪ್ರಸಾದ್ ಗೆಲ್ಲಲಿದ್ದಾರೆ ಎಂಬುದು ಕಮಲದ ಲೆಕ್ಕಾಚಾರ. ಜೆಡಿಎಸ್ ಹಾಗೂ ಕಾಂಗ್ರೆಸ್ ನ ಕೆಲವು ನಾಯಕರು ಸಂಸದ ಧ್ರುವಗೆ ಒಳೇಟು ನೀಡಿದ್ದು ಬಿಎಸ್ ಪಿ ಕೂಡ ಕಾಂಗ್ರೆಸ್ ನ ಮತಗಳನ್ನು ಕಿತ್ತಿದೆ ಎಂದು ನಂಬಿರುವ ಬಿಜೆಪಿ ನಾಯಕರು ಈ ಬಾರಿ ಗೆಲುವು ತಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಒಟ್ಟಿನಲ್ಲಿ ಗೆಲುವಿನ ನಗೆ ಬೀರುವವರು ಯಾರೂ ಎಂಬ ಪ್ರಶ್ನೆಗೆ ಇನ್ನು ಇದೇ 23 ರಂದು ಉತ್ತರ ಸಿಗಲಿದೆ.

ABOUT THE AUTHOR

...view details