ಚಾಮರಾಜನಗರ: ಕೊರೊನಾ ಪ್ರಕರಣಗಳು ಇಳಿಕೆಗೊಂಡಿರುವುದರಿಂದ ಕಳೆದ ತಿಂಗಳಿನಿಂದ ಜಾರಿಯಲ್ಲಿರುವ ವಾರಾಂತ್ಯದ ನಿರ್ಬಂಧವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ಆದೇಶ ಹೊರಡಿಸಿದ್ದಾರೆ.
ಅದರಂತೆ, ವೀಕೆಂಡ್ ಕರ್ಫೂನಿಂದ ಜಿಲ್ಲೆಗೆ ವಿನಾಯಿತಿ ಸಿಕ್ಕಿದೆ. ರಾತ್ರಿ 9 ರಿಂದ ಬೆಳಗ್ಗೆ 5 ರವರೆಗಿನ ನೈಟ್ ಕರ್ಫ್ಯೂ ಸೆ. 13ವರೆಗೆ ಮುಂದುವರೆಯಲಿದೆ. ಸಭೆ, ಸಮಾರಂಭಗಳಿಗೆ ಶೇ. 50 ರಷ್ಟು ಅವಕಾಶ, ರಾಜ್ಯಕ್ಕೆ ಪ್ರವೇಶಿಸಬೇಕಾದರೆ 72 ಗಂಟೆ ಒಳಗಿನ ಆರ್ಟಿಪಿಸಿಆರ್ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಹಾಗೂ ರೆಸಾರ್ಟ್, ಹೋಟೆಲ್ ಗಳಲ್ಲಿ ತಂಗಲು ನೆಗೆಟಿವ್ ರಿಪೋರ್ಟ್ ತೋರಿಸಬೇಕಾದದ್ದು ಮುಂದುವರೆಯಲಿದೆ.