ಕರ್ನಾಟಕ

karnataka

ETV Bharat / state

ಕೇಂದ್ರ ಅಕ್ಕಿ ಕೊಡದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದ್ದೇವೆ: ಬಿಜೆಪಿಗೆ ಸಚಿವ ವೆಂಕಟೇಶ್ ಟಾಂಗ್ - ಸಚಿವ ಕೆ ವೆಂಕಟೇಶ್​

ಬಿಜೆಪಿಯವರು ಹೇಳ್ತಾ ಇರ್ತಾರೆ, ಅವರು ಹೇಳಿದ್ದನ್ನೆಲ್ಲ ನಾವು ಕೇಳೋಕ್ಕಾಗುತ್ತಾ ಎಂದು ಸಚಿವ ಕೆ ವೆಂಕಟೇಶ್​ ತಿರುಗೇಟು ನೀಡಿದ್ದಾರೆ.

Minister Venkatesh
ಸಚಿವ ವೆಂಕಟೇಶ್

By

Published : Jul 1, 2023, 1:08 PM IST

ಕೇಂದ್ರ ಅಕ್ಕಿ ಕೊಡದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೇವೆ: ಬಿಜೆಪಿಗೆ ಸಚಿವ ವೆಂಕಟೇಶ್ ಟಾಂಗ್

ಚಾಮರಾಜನಗರ: ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಕ್ಕೆ ವಿಧಿ ಇಲ್ಲದೇ ನಾವು ಹಣ ಕೊಡುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರು, ಬಿಜೆಪಿಯವರ ಹಣ ಬೇಡ ಅಕ್ಕಿಯನ್ನೇ ಕೊಡಿ, 10 ಕೆಜಿ ಅಲ್ಲ, ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರದ್ದು, ಅದು ಸೇರಿಸಿ, ಒಟ್ಟು 15 ಕೆಜಿ ಅಕ್ಕಿ ಕೊಡಿ ಎನ್ನುವ ಟೀಕೆಗೆ ತಿರುಗೇಟು ನೀಡಿದ್ದಾರೆ.

ಚಾಮರಾಜನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಐದು ಗ್ಯಾರಂಟಿ ಯೋಜನೆಗಳಲ್ಲಿ ವಿದ್ಯುತ್, ಅಕ್ಕಿ ಗ್ಯಾರಂಟಿ ಜಾರಿಯಾಗುತ್ತಿದೆ. ನಾವು ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದ್ದೇವೆ. ಅಕ್ಕಿ ಬದಲು ಹಣ ಕೊಡುವ ವಿಚಾರವನ್ನು ವಿರೋಧ ಮಾಡುವವರು ಮಾಡುತ್ತಿರುತ್ತಾರೆ. ಅಕ್ಕಿ ಸಂಗ್ರಹವಾದ ಮೇಲೆ ಅಕ್ಕಿಯನ್ನು ಕೊಡುತ್ತೇವೆ, ಹಣ ಕೊಡುವುದು ತಾತ್ಕಾಲಿಕ ವ್ಯವಸ್ಥೆ ಎಂದು ಹೇಳಿದರು.

ನಾವು ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆಗಳನ್ನು ನೀಡಿದ್ದೇವೆ. ಅದರಂತೆ ನಾವು ನೀಡಿದ ಭರವಸೆಗಳನ್ನು ಈಡೇರಿಸಲು ಕೇಂದ್ರದ ಬಳಿ ಅಕ್ಕಿ ನೀಡುವಂತೆಯೂ ಮನವಿ ಮಾಡಿಕೊಂಡಿದ್ದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿ, ಅಕ್ಕಿ ಕೊಡದ ಕಾರಣ ವಿಧಿ ಇಲ್ಲದೆ ಈಗ ಹಣ ಕೊಡುತ್ತಿದ್ದೇವೆ. ಇದು ತಾತ್ಕಾಲಿಕವಷ್ಟೇ. ಎರಡ್ಮೂರು ತಿಂಗಳಲ್ಲಿ ಅಕ್ಕಿ ಸ್ಟೋರೇಜ್​ ಆದರೆ ನಂತರದಲ್ಲಿ ಜನರಿಗೆ ಅಕ್ಕಿಯನ್ನೇ ಕೊಡುತ್ತೇವೆ, ಪ್ರತಿಪಕ್ಷದವರು ಹೇಳಿದಂಗೆ ಕೇಳೋಕ್ ಆಗಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಇನ್ನೇನ್ ಕೆಲಸ ಇದೆ, ಏನಾದ್ರು ಹೇಳುತ್ತಿರುತ್ತಾರೆ. ಅವರು ಹೇಳಿದಂಗೆ ನಾವು ಕೇಳೋದಕ್ಕಾಗುತ್ತಾ? ಪ್ರತಿಭಟನೆ ಮಾಡುವವರಿಗೆ ಬೇಡ ಅನ್ನೋಕೆ ಆಗುತ್ತಾ, ಮಾಡಲಿ ಎಂದು ಯಡಿಯೂರಪ್ಪ ಅವರು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದರೆ, ವಿಧಾನಸೌಧದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂಬ ವಿಚಾರಕ್ಕೆ ಸಚಿವ ವೆಂಕಟೇಶ್​ ಟಾಂಗ್​ ಕೊಟ್ಟರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ವೇಳೆ ಕಾಂಗ್ರೆಸ್​ ನಾಯಕರು ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ್ದರು. ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವುದಾಗಿಯೂ ಹೇಳಿಕೊಂಡಿದ್ದರು. ಕಾಂಗ್ರೆಸ್​ ಈಗಾಗಲೇ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆ ಜಾರಿಯಾಗಿದೆ. ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಜನರು ಅರ್ಜಿಗಳನ್ನು ಹಾಕುತ್ತಿದ್ದಾರೆ. ಮನೆ ಒಡತಿಯರ ಖಾತೆಗೆ 2000 ರೂ. ಜಮೆ ಮಾಡುವ ಯೋಜನೆಗೆ ಚಾಲನೆ ನೀಡಬೇಕಿದೆ. ಹತ್ತು ಕೆಜಿ ಅಕ್ಕಿ ನೀಡುವ ಯೋಜನೆಯಲ್ಲಿ ಸದ್ಯಕ್ಕೆ ಅಕ್ಕಿ ನೀಡುವ ಬದಲು ಖಾತೆಗಳಿಗೆ ಅಕ್ಕಿಯ ದರದ ಹಣವನ್ನು ನೀಡುವುದಾಗಿ ಸರ್ಕಾರ ಹೇಳಿದೆ.

ಇದನ್ನೂ ಓದಿ:ಮಹಿಳೆಯರಿಂದ ಉತ್ತಮ ಸ್ಪಂದನೆ, ಸರ್ಕಾರದ ಶಕ್ತಿ ಯೋಜನೆ ಸಶಕ್ತ: ಸಚಿವ ರಾಮಲಿಂಗಾ ರೆಡ್ಡಿ

ABOUT THE AUTHOR

...view details