ಚಾಮರಾಜನಗರ :ಹಿಜಾಬ್ ವಿವಾದ ಈಗ ತ್ರಿಸದಸ್ಯ ಪೀಠದಲ್ಲಿದೆ. ಕೋರ್ಟ್ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಒಂದು ಸೂಕ್ಷ್ಮ ವಿಚಾರ. ಇದರ ಬಗ್ಗೆ ಹೆಚ್ಚು ನಾನು ಮಾತನಾಡಲ್ಲ.
ಹಿಜಾಬ್-ಕೇಸರಿ ವಿವಾದದ ಕುರಿತಂತೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿರುವುದು.. ಎಲ್ಲದಕ್ಕಿಂತ ದೊಡ್ಡದು ಈ ದೇಶದ ಪರಂಪರೆ, ಮಕ್ಕಳ ಶಿಕ್ಷಣ. ಭಾರತದಲ್ಲಿ ಒಗ್ಗಟ್ಟು ಮುಖ್ಯವಾಗಿದ್ದರಿಂದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಏನೇ ಆದೇಶ ಹೊರಬಿದ್ದರೂ ನಾವು ಬದ್ಧರಾಗಿರುತ್ತೇವೆ ಎಂದರು.
ದಿಂಬಂ ಘಟ್ಟದಲ್ಲಿ ರಾತ್ರಿ ಸಂಚಾರ ನಿರ್ಬಂಧವಾಗಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದರಿಂದ ರಾಜ್ಯಕ್ಕಾಗುವ ಸಾಧಕ-ಬಾಧಕಗಳ ಬಗ್ಗೆ ಸಿಎಂ ಅವರಿಗೆ ವಿವರಿಸಿ ಮುಂದೇನು ಮಾಡಬಹುದು ಎಂದು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ ಎಂಬ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ದೇವರು ಚೆನ್ನಾಗಿ ಬುದ್ಧಿಕೊಡಲಿ ಎಂದರು.
ಇದನ್ನೂ ಓದಿ:ಹಿಜಾಬ್ ವಿವಾದ: ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶಿಸುತ್ತೇವೆ, ತುರ್ತುವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್