ಗುಂಡ್ಲುಪೇಟೆ (ಚಾಮರಾಜನಗರ): ಕೇರಳದ ಅರಣ್ಯ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ತಾಲೂಕಿನ ಗಡಿದ ಮೂಲೆ ಹೊಳೆ ತುಂಬಿ ಹರಿಯುತ್ತಿದೆ. ಹೆಚ್ಚಿನ ನೀರು ಕಾಡಿನ ಭಾಗದಿಂದ ರಸ್ತೆಗೆ ಹರಿದು ಬರುತ್ತಿದೆ. ಹೀಗಾಗಿ, ವಾಹನ ಸವಾರರು ಪರದಾಡುವಂತಾಯಿತು.
ಗಡಿಭಾಗದಲ್ಲಿ ಜೋರು ಮಳೆ: ರಸ್ತೆ ಮೇಲೆಲ್ಲಾ ನೀರು, ವಾಹನ ಸವಾರರ ಪೇಚಾಟ - ಅರಣ್ಯ ಅಧಿಕಾರಿ
ಕೇರಳದ ಮುತಾಂಗ ಅರಣ್ಯ ಪ್ರದೇಶ ಸೇರಿದಂತೆ ಬತ್ತೆರಿ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ತಾಲೂಕಿನ ಭಾಗದಿಂದ ಸಾಗುವ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಕೇರಳದ ಗಡಿ ಭಾಗದ ಅಧಿಕಾರಿಗಳ ಸಂಪರ್ಕದಲ್ಲಿದ್ದುಕೊಂಡು ವಾಹನಗಳನ್ನು ಬಿಡಲಾಗುತ್ತಿದೆ.
rain
ಕೇರಳದ ಮುತಾಂಗ ಅರಣ್ಯ ಪ್ರದೇಶ ಸೇರಿದಂತೆ ಬತ್ತೆರಿ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ತಾಲೂಕಿನ ಭಾಗದಿಂದ ಸಾಗುವ ವಾಹನಗಳಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಕೇರಳದ ಗಡಿ ಭಾಗದ ಅಧಿಕಾರಿಗಳ ಸಂಪರ್ಕದಲ್ಲಿದ್ದುಕೊಂಡು ವಾಹನಗಳನ್ನು ಬಿಡಲಾಗುತ್ತಿದೆ.
ಒಂದು ವೇಳೆ ಮಳೆ ಹೆಚ್ಚಾದರೆ ವಾಹನಗಳನ್ನು ತಡೆ ಹಿಡಿಯಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಈ ಭಾಗದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಎರಡು ದಿನಗಳ ಕಾಲ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು.