ಕರ್ನಾಟಕ

karnataka

ETV Bharat / state

ವಿಡಿಯೋ: ಹಸುವಿನ ರಕ್ತ ಹೀರಲು ಸಜ್ಜಾಗಿದ್ದ ಚಿರತೆ ಹಿಮ್ಮೆಟ್ಟಿಸಿ ತಾನೇ ಆಹಾರವಾದ ನಾಯಿ - ಚಾಮರಾಜನಗರ

ಚಾಮರಾಜನಗರ ತಾಲೂಕಿನ‌ ನಂಜದೇವನಪುರದಲ್ಲಿ ಚಿರತೆ ದಾಳಿಯಿಂದ ಹಸುವನ್ನು ಕಾಪಾಡಲು ತೆರಳಿ ಭೀಮಾ ಎಂಬ ನಾಯಿ ಬಲಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

watch video: leopard attack on dog
ಚಿರತೆ ದಾಳಿಗೆ ಬಲಿಯಾದ ನಾಯಿ

By

Published : Oct 22, 2021, 10:44 AM IST

ಚಾಮರಾಜನಗರ: ಶ್ವಾನದ ನಿಯತ್ತು, ಮಾಲೀಕನಿಗೆ ಯಾವಾಗಲೂ ಒಳಿತನ್ನೇ ಬಯಸುವ ನಾಯಿಗಳ ಗುಣ ಆಗಾಗ ವರದಿಯಾಗುತ್ತಲೇ ಇರುತ್ತದೆ.‌ ಅಂತಹದ್ದೇ‌ ಒಂದು ಘಟನೆ ಚಾಮರಾಜನಗರ ತಾಲೂಕಿನ‌ ನಂಜದೇವನಪುರದಲ್ಲಿ ನಡೆದಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಂಜದೇವನಪುರ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಚಿರತೆಯಿಂದ ಹಸು ಕಾಪಾಡಲು ತೆರಳಿ 'ಭೀಮಾ' ಎಂಬ ನಾಯಿ ಬಲಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಚಿರತೆ ದಾಳಿಗೆ ಬಲಿಯಾದ ನಾಯಿ

ಆಹಾರಕ್ಕಾಗಿ ಹೊಂಚು ಹಾಕಿ ಕುಳಿತ ಚಿರತೆಯೊಂದು ಹಸುವಿನ ಮೇಲೆರಗಲು ಮುಂದಾಗುತ್ತಿತ್ತು. ಈ ವೇಳೆ ಸಮೀಪದಲ್ಲೇ ಅಡ್ಡಾಡುತ್ತಿದ್ದ ಸಾಕುನಾಯಿಗಳ‌ ಗುಂಪು‌ ಚಿರತೆಯನ್ನು ಅಟ್ಟಾಡಿಸಿ, ಹಿಮ್ಮೆಟ್ಟಿಸುವ ಕೊನೆ ಕ್ಷಣದಲ್ಲಿ ಭೀಮಾ ಚಿರತೆಗೆ ಆಹಾರವಾಗಿದೆ. ಚಿರತೆ ದಾಳಿಯಿಂದ ಹಸು ಬಚಾವ್ ಮಾಡಿ ತಾನು ಬಲಿಯಾಗಿದೆ.‌

ಕಳೆದ 6-7 ತಿಂಗಳಿನಿಂದ ಚಿರತೆ ಕಾಟಕ್ಕೆ ಇಲ್ಲಿನ ರೈತರು ಕಂಗಾಲಾಗಿದ್ದು, ಚಿರತೆ ದಾಳಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ABOUT THE AUTHOR

...view details