ಕರ್ನಾಟಕ

karnataka

ETV Bharat / state

ಚಾಮರಾಜನಗರ ಲೋಕ ಸಮರ: ನೀರಿಗಾಗಿ ಆಲೂರು, ಮೂಲ ಸೌಕರ್ಯಕ್ಕಾಗಿ ದೊಡ್ಡಾನೆಯಲ್ಲಿ ಮತದಾನ ಬಹಿಷ್ಕಾರ!

ಚಾಮರಾಜನಗರ ಜಿಲ್ಲೆಯ ಆಲೂರು ಹಾಗೂ ದೊಡ್ಡಾನೆಯಲ್ಲಿ ಇದುವರೆಗೂ ಮತದಾನ ಮಾಡದೇ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

By

Published : Apr 18, 2019, 9:17 AM IST

ಮತದಾನ

ಚಾಮರಾಜನಗರ:ಜನತಂತ್ರದ ಹಬ್ಬ ಜಿಲ್ಲಾದ್ಯಂತ ಆರಂಭವಾಗಿದೆ. ಆದರೆ, ಚಾಮರಾಜನಗರ ತಾಲೂಕಿನ ಆಲೂರು ಗ್ರಾಮ ಹಾಗೂ ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ದೊಡ್ಡನೆ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ.

ಚಾಮರಾಜನಗರ ಲೋಕ ಸಮರ

ಸುವರ್ಣಾವತಿ ಜಲಾಶಯದಿಂದ ನೀರು ಬಿಡದಿರುವುದರಿಂದ ಮತದಾನ ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದೇವೆ ಎಂದು ಬಿಎಸ್​​ಪಿ ತಾಲೂಕು ಅಧ್ಯಕ್ಷ ಆಲೂರು ಮಲ್ಲು ತಿಳಿಸಿದ್ದಾರೆ. ಇನ್ನು, ದೊಡ್ಡಾನೆ ಗ್ರಾಮಕ್ಕೆ ಮೂಲ ಸೌಕರ್ಯ ನೀಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಕಷ್ಟ ಕೇಳದಿದ್ದ ಮೇಲೆ ಮತದಾನ ಏಕೆ ಮಾಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ನೀರಿಗಾಗಿ ಆಲೂರು, ಮೂಲ ಸೌಕರ್ಯಕ್ಕಾಗಿ ದೊಡ್ಡಾನೆಯಲ್ಲಿ ಮತದಾನ ಬಹಿಷ್ಕಾರ

ಆಲೂರು ಹಾಗೂ ದೊಡ್ಡಾನೆಯಲ್ಲಿ ಇದುವರೆಗೂ ಮತದಾನ ಮಾಡದೇ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ABOUT THE AUTHOR

...view details