ಕರ್ನಾಟಕ

karnataka

By

Published : May 10, 2023, 1:34 PM IST

ETV Bharat / state

ರಸ್ತೆ, ಬಸ್ ಸಮಸ್ಯೆ: ಮಧ್ಯಾಹ್ನವಾದರೂ ಮತ ಹಾಕದ ಚಾಮರಾಜನಗರದ ಗ್ರಾಮಸ್ಥರು!

ಮೂಲಸೌಕರ್ಯ ಸಮಸ್ಯೆ ಹಿನ್ನೆಲೆ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

voting boycott in chamarajanagara
ಮತದಾನ ಬಹಿಷ್ಕರಿಸಿದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು

ಮತದಾನ ಬಹಿಷ್ಕರಿಸಿದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು

ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆ ಕರ್ನಾಟಕದಾದ್ಯಂತ ಮತದಾನ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ಆಗುತ್ತಿದ್ದರೂ, ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಈವರೆಗೆ ಒಬ್ಬರೂ ಮತ ಹಾಕಿಲ್ಲ.

ಹೌದು, ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ 101 ಅರ್ಹ ಮತದಾರರಿದ್ದಾರೆ. ಆದರೆ, ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲವೆಂದು ಗ್ರಾಮಸ್ಥರು ಅಸಮಾಧಾನಗೊಂಡು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಇದನ್ನೂ ಓದಿ:ವೋಟ್‌ ಹಾಕಲು ಅಮೆರಿಕದಿಂದ ಬಂದ್ರು: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ನಿರಾಶರಾದ್ರು!

ಮೂಲಸೌಕರ್ಯ ಸಮಸ್ಯೆಯಿಂದಾಗಿ ಬೆಳಗ್ಗೆಯಿಂದಲೇ ಮತಗಟ್ಟೆಯತ್ತ ತಿರುಗಿಯೂ ನೋಡದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗುಂಡ್ಲುಪೇಟೆ ತಹಶೀಲ್ದಾರ್ ತಳವಾರ್ ಸ್ಥಳಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರ ಜೊತೆ ಮಾತನಾಡಿದ್ದಾರೆ. ಆದರೆ, ತಹಶೀಲ್ದಾರ್ ಮಾತಿಗೆ ಒಪ್ಪದ ಗ್ರಾಮಸ್ಥರು ಎಲ್ಲರೊಂದಿಗೆ ಸಭೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆ ಕಳೆದರೂ ಯಾರೊಬ್ಬರು ಮತ ಹಾಕಿಲ್ಲ ಎಂದು ತಿಳಿದು ಬಂದಿದೆ. ಉಳಿದಿರುವ ಕೆಲ ಹೊತ್ತಿನಲ್ಲಿ ಎಷ್ಟು ಮಂದಿ ಬಂದು ಮತ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಕರ್ನಾಟಕ ಎಲೆಕ್ಷನ್​: ಡಾಲಿ ಧನಂಜಯ್, ರಿಷಬ್​ ಶೆಟ್ಟಿ ಮತದಾನ

ABOUT THE AUTHOR

...view details