ಕರ್ನಾಟಕ

karnataka

ETV Bharat / state

ಮತದಾರರ ಮನವೊಲಿಸಿದ ಜಿಲ್ಲಾಡಳಿತ: ಸಿದ್ದಯ್ಯನಪುರದಲ್ಲಿ ವೋಟಿಂಗ್ ಆರಂಭ - ಸಿದ್ದಯ್ಯನಪುರ ಗ್ರಾಮದಲ್ಲಿ ಮತದಾನ ಆರಂಭ

ನಾಲ್ಕು ಸ್ಥಾನಕ್ಕೆ ಎರಡು ಮತ ಹಾಕುವಂತೆ ಸೂಚಿಸಿದ ಹಿನ್ನೆಲೆ ಮತ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು, ಇದೀಗ ಜಿಲ್ಲಾಡಳಿತದ ಮಾತಿಗೆ ಕಿವಿಗೊಟ್ಟು ಮತಚಲಾಯಿಸಲು ಮುಂದಾಗಿದ್ದಾರೆ.

siddaiahnapura
ಸಿದ್ದಯ್ಯನಪುರ ಗ್ರಾಮದಲ್ಲಿ ಮತದಾನ ಪ್ರಕ್ರಿಯೆ ಆರಂಭ

By

Published : Dec 27, 2020, 5:29 PM IST

ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1ನೇ ವಾರ್ಡ್​ನಲ್ಲಿ ನಾಲ್ಕು ಸ್ಥಾನಕ್ಕೆ ಎರಡು ಮತ ಹಾಕುವಂತೆ ಸೂಚಿಸಿದ ಹಿನ್ನೆಲೆ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ಆದ್ರೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ತಹಶೀಲ್ದಾರ್ ಅವರ ಮನವೊಲಿಸಿದ್ದರಿಂದ ಗ್ರಾಮಸ್ಥರು ಮತ ಚಲಾವಣೆಗೆ ಮುಂದಾಗಿದ್ದಾರೆ.

ಸಿದ್ದಯ್ಯನಪುರ ಗ್ರಾಮದಲ್ಲಿ ಮತದಾನ ಪ್ರಕ್ರಿಯೆ ಆರಂಭ

ಓದಿ:ಮತದಾನ ಬಹಿಷ್ಕರಿಸಿದ ಸಿದ್ದಯ್ಯನಪುರ ಗ್ರಾಮಕ್ಕೆ ಡಿಸಿ, ಎಸ್ಪಿ ಭೇಟಿ

ಅಧಿಕಾರಿಗಳ ಸತತ ಪ್ರಯತ್ನ ಹಾಗೂ ಜಿಲ್ಲಾಧಿಕಾರಿಗಳ ಮಾತಿಗೆ ಮಣಿದು ಮತ ಚಲಾಯಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮಸ್ಥರ ಈ ಬದಲಾವಣೆಗೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 12.30 ರಿಂದ ಮತದಾನ ಪ್ರಾರಂಭವಾಗಿದ್ದು ಸಂಜೆ 5 ಗಂಟೆಯವರೆಗೂ ಕಾಲಾವಕಾಶವಿದೆ. ಮತದಾನಕ್ಕೆ ಸಮಯದ ತೊಂದರೆಯಾದರೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ABOUT THE AUTHOR

...view details