ಚಾಮರಾಜನಗರ: ಬೆಂಗಳೂರು, ಗುಂಡ್ಲುಪೇಟೆ, ಮಂಡ್ಯಕ್ಕೆ ಕೆಲಸ ಅರಸಿ ಹೋದವರು ಗ್ರಾಮಕ್ಕೆ ಮರಳುವಾಗ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕೆಂದು ಜಿಲ್ಲೆಯ ಮಂಗಲ ಗ್ರಾಮದ ಮುಖಂಡರು ಡಂಗೂರ ಸಾರಿಸಿದ್ದಾರೆ.
ಚಾಮರಾಜನಗರ: ಕೊರೊನಾ ಟೆಸ್ಟ್ ಮಾಡಿಸದಿದ್ರೆ ₹ 10 ಸಾವಿರ ದಂಡ... ಡಂಗೂರ ಸಾರಿಸಿ ಜನಜಾಗೃತಿ! - ಮಂಗಲ ಗ್ರಾಮ
ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡುತ್ತಿರುವುದರ ಶಂಕೆ ಹಿನ್ನೆಲೆ ಚಾಮರಾಜನಗರದ ಮಂಗಲ ಗ್ರಾಮದ ಮುಖಂಡರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಡಂಗೂರ
ಕೊರೊನಾ ಪ್ರಕರಣಗಳು ಹಳ್ಳಿಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ ತಮ್ಮೂರಿನ ಮಂದಿಗೆ ಮಾತ್ರ ಕ್ಷೌರ, ಅಪರಿಚಿತರಿಗೆ ಗ್ರಾಮ ಪ್ರವೇಶಕ್ಕೆ ನಿರ್ಬಂಧ, ಸಾಮೂಹಿಕ ಕೊರೊನಾ ಟೆಸ್ಟ್, ಸ್ವಯಂ ನಿರ್ಬಂಧದಂತಹ ಹಲವಾರು ತೀರ್ಮಾನಗಳನ್ನು ಜಿಲ್ಲೆಯ ಹಲವು ಗ್ರಾಮಗಳು ಕೈಗೊಂಡಿವೆ.