ಸ್ವಯಂ ಪ್ರೇರಿತವಾಗಿ ಗ್ರಾಮದ ರಸ್ತೆ ಬಂದ್ ಮಾಡಿದ ಮಹಿಳೆಯರು ...! - Thimmarajipura village
ಚಾಮರಾಜನಗರ ಜಿಲ್ಲಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜೀಪುರ ಮಹಿಳೆಯರು ಸ್ವತಃ ಗ್ರಾಮದ ರಸ್ತೆ ಬಂದ್ ಮಾಡಿಕೊಂಡಿದ್ದಾರೆ.
ಕೊರೊನಾ ಭೀತಿ ಗ್ರಾಮದ ರಸ್ತೆಯ ಬಂದ್ ಮಾಡಿದ ಮಹಿಳೆಯರು
ಕೊಳ್ಳೇಗಾಲ:ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವುದರಿಂದ ಇಲ್ಲಿನ ಹಲವಾರು ಗ್ರಾಮಸ್ಥರು ಸ್ವಯಂ ಲಾಕ್ಡೌನ್ಗೆ ಮುಂದಾಗಿದ್ದು, ಬೆಂಗಳೂರು ಹಾಗೂ ಮೈಸೂರಿನಿಂದ ಬರುವ ಜನಗಳಿಗೆ ನಿರ್ಬಂಧ ಹೇರಿದ್ದಾರೆ.
ಆಯಾ ಗ್ರಾಮಗಳಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಊರಿಗೆ ಸೇರಿಸಿಕೊಳ್ಳಬಾರದು. ಒಂದು ವೇಳೆ ಸೇರಿಸಿಕೊಂಡರೆ 10 ಸಾವಿರ ರೂ ದಂಡ ಎಂಬ ಕ್ರಮಗಳನ್ನು ಮುಖಂಡರು ತೆಗೆದುಕೊಂಡಿದ್ದಾರೆ. ಕೊಳ್ಳೇಗಾಲ ಸುತ್ತಮುತ್ತಲು ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಎಚ್ಚೆತ್ತ ಇಲ್ಲಿನ ತಿಮ್ಮರಾಜೀಪುರ ಗ್ರಾಮದ ಮಹಿಳೆಯರು ತಮ್ಮ ಗ್ರಾಮದ ರಸ್ತೆಯನ್ನು ವಿದ್ಯುತ್ ಕಂಬ ಅಡ್ಡಲಾಗಿ ಹಾಕುವ ಮೂಲಕ ಬಂದ್ ಮಾಡಿಕೊಂಡಿದ್ದಾರೆ.