ಕರ್ನಾಟಕ

karnataka

ETV Bharat / state

ಗ್ರಾಮ‌ ಲೆಕ್ಕಿಗನ ಸಾಹಸ: ಚಾಮರಾಜನಗರದ 189 ಹಳ್ಳಿ ಚರಿತ್ರೆ ಬರೆದ ಬಳ್ಳಾರಿ ಹೈದ! - ಗ್ರಾಮ‌ ಲೆಕ್ಕಿಗ ಶ್ರೀಧರ್

ಚಾಮರಾಜನಗರ ತಾಲೂಕಿ‌ನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಗ್ರಾಮ‌ ಲೆಕ್ಕಿಗ ಶ್ರೀಧರ್ ಮುಂದಾಗಿದ್ದು, ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ.

Village accountant who wrote a book
ಚಾಮರಾಜನಗರದ ಚರಿತ್ರೆ ಬರೆದ ಗ್ರಾಮ‌ ಲೆಕ್ಕಿಗ ಶ್ರೀಧರ್

By

Published : Oct 11, 2022, 9:12 AM IST

Updated : Oct 12, 2022, 11:59 AM IST

ಚಾಮರಾಜನಗರ: ಸರ್ಕಾರಿ ನೌಕರಿ ಅಂದ್ರೆ 'ಗಂಟೆ ಹೊಡಿ ಸಂಬಳ ತಗೋ' ಎಂಬ ಮಾತಿಗೆ ಅಪವಾದವಾಗಿ ತನ್ನೂರು ಬಿಟ್ಟು ನೂರಾರು ಕಿ.ಮೀ ಬಂದು ನೆಲೆಸಿರುವ ಈ ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು, ಅದರಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಅವರು ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ 6 ತಾಸು ಕೆಲಸವಷ್ಟೇ ಎಂಬ ಮನಸ್ಥಿತಿ ಹೊರಬಿಟ್ಟು ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಮುಂದಾಗಿದ್ದಾರೆ‌.

ಚಾಮರಾಜನಗರದ ಚರಿತ್ರೆ ಬರೆದ ಗ್ರಾಮ‌ ಲೆಕ್ಕಿಗ ಶ್ರೀಧರ್

'ಚಾಮರಾಜನಗರ ದರ್ಶನಂ'ನಲ್ಲಿ 189 ಹಳ್ಳಿಗಳ ಚರಿತ್ರೆ: ಚಾಮರಾಜನಗರ ತಾಲೂಕಿ‌ನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಶ್ರೀಧರ್ ಮುಂದಾಗಿದ್ದು, ಕೃತಿಗೆ 'ಚಾಮರಾಜನಗರ ದರ್ಶನಂ' ಎಂದು ಹೆಸರಿಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಈ ಕೃತಿ ಬಿಡುಗಡೆಯಾಗಲಿದೆ‌.

ಗ್ರಾಮ‌ ಲೆಕ್ಕಿಗನ ಸಾಹಸ: ಚಾಮರಾಜನಗರದ 189 ಹಳ್ಳಿ ಚರಿತ್ರೆ ಬರೆದ ಬಳ್ಳಾರಿ ಹೈದ

ಊರಿಗೆ ಆ ಹೆಸರು ಯಾಕೆ ಬಂತು?, ಹಳೆಯ ಹೆಸರೇನು?, ಶಾಸನಗಳಲ್ಲಿ ಊರಿನ ಉಲ್ಲೇಖ, ಊರಲ್ಲಿರುವ ಮತದಾರರು, ಜನಸಂಖ್ಯೆ, ದೇವಾಲಯಗಳು, ದೇವಾಲಯಗಳ ಶೈಲಿ, ಗ್ರಾಮದ ಹಿರಿಯರ ಮಾತುಗಳು, ಊರಲ್ಲಿರುವ ಕೆರೆಗಳ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಡುತ್ತಿದ್ದಾರೆ‌.

ಕಳೆದ 6-8 ತಿಂಗಳುಗಳು ಕಾಲ ಚರಿತ್ರೆ ಬರೆಯಲು ಹಳ್ಳಿಗಳಿಗೆ ಎಡತಾಕಿ ಶಾಸನಗಳನ್ನು ಕಂಡು, ಎಫಿಗ್ರಾಪಿ ಕರ್ನಾಟಕವನ್ನು ಓದಿಕೊಂಡು ಈ ಇತಿಹಾಸ ಸಾರುವ ಪುಸ್ತಕವನ್ನು ಶ್ರೀಧರ್ ಸಿದ್ಧಪಡಿಸಿದ್ದಾರೆ‌.

ಇದನ್ನೂ ಓದಿ:ಚಾಮರಾಜನಗರ: ಬ್ರಿಟಿಷರ ಲಾಠಿ ಕಿತ್ತು ಬಿಸಾಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟಾಗೆಟ್ ಇನ್ನಿಲ್ಲ

Last Updated : Oct 12, 2022, 11:59 AM IST

ABOUT THE AUTHOR

...view details