ಚಾಮರಾಜನಗರ: ತನ್ನ ಕುಟುಂಬ, ಮಕ್ಕಳು ಎಲ್ಲವನ್ನೂ ಬಿಟ್ಟು ಯಾರೂ ಇಲ್ಲದೆಯೇ ಬದುಕು ಸಾಗಿಸುತ್ತಿರುವ ಹಿರಿಯ ಜೀವಗಳ ಜೊತೆಗೆ ಗ್ರಾಮ ಲೆಕ್ಕಿಗನೋರ್ವ ದೀಪಾವಳಿ ಆಚರಿಸುವ ಮೂಲಕ, ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಸಂತೇಮರಹಳ್ಳಿಯಲ್ಲಿನ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿತ್ತು. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗ ಶ್ರೀಧರ್ಅಲ್ಲಿಗೆ ತೆರಳಿ, ಅಲ್ಲಿರುವ 24 ಮಂದಿ ಹಿರಿಯ ನಾಗರಿಕರಿಗೆಲ್ಲರಿಗೂ ಹಣ್ಣು, ಸಿಹಿ ವಿತರಿಸಿ ಅಕ್ಕಿ ಚೀಲ ವಿತರಿಸಿದರು. ಜೊತೆಗೆ ದಾನಿಗಳ ಸಹಾಯದಿಂದ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ.