ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟಕ್ಕೆ ಬಿ.ವೈ.ವಿಜಯೇಂದ್ರ ಹಾಗೂ ಸುತ್ತೂರು ಶ್ರಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಾದಪ್ಪನ ಬೆಟ್ಟಕ್ಕೆ ಸಿಎಂ ಪುತ್ರ ವಿಜಯೇಂದ್ರ, ಸುತ್ತೂರು ಶ್ರೀ ಭೇಟಿ.. ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ - ಚಾಮರಾಜನಗರ ಬಿ.ವೈ.ವಿಜಯೇಂದ್ರ ಸುದ್ದಿ
ಮಲೆ ಮಹದೇಶ್ವರ ಬೆಟ್ಟಕ್ಕೆ ಬಿ.ವೈ.ವಿಜಯೇಂದ್ರ, ಸುತ್ತೂರು ಮಠದ ಶ್ರೀ, ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಲಿದ್ದು, ಇವರಿಗೆ ಬಿಜೆಪಿ ಶಾಸಕ ನಿರಂಜಕುಮಾರ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸಾಥ್ ನೀಡಲಿದ್ದಾರೆ
![ಮಾದಪ್ಪನ ಬೆಟ್ಟಕ್ಕೆ ಸಿಎಂ ಪುತ್ರ ವಿಜಯೇಂದ್ರ, ಸುತ್ತೂರು ಶ್ರೀ ಭೇಟಿ.. ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ vijayendra-visit-to-malemahadeshwara-temple](https://etvbharatimages.akamaized.net/etvbharat/prod-images/768-512-6374904-thumbnail-3x2-dr.jpg)
ಮಲೆ ಮಹದೇಶ್ವರ ಬೆಟ್ಟಕ್ಕೆ ವಿಜಯೆಂದ್ರ, ಸುತ್ತೂರು ಶ್ರೀ ಭೇಟಿ.
ಹನೂರಿನಲ್ಲಿ ಗುರುವಾರ ನಡೆಯುವ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಅವರು ಪಾಲ್ಗೊಳ್ಳಲಿದ್ದು ಇಂದು ರಾತ್ರಿ ಮಲೆ ಮಹದೇಶ್ವರ ಬೆಟ್ಟದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಸುತ್ತೂರು ಶ್ರೀ ಹಾಗೂ ವಿಜಯೇಂದ್ರ ದೇಗುಲ ಭೇಟಿ ವೇಳೆ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜಕುಮಾರ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಇದ್ದರು.