ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ವ್ಯಾಘ್ರನ ದರ್ಶನ ಸಾಮಾನ್ಯವಾಗಿದ್ದು, ಒಂದೇ ದಿನ ಎರಡು ಕಡೆ ಹುಲಿ ದರ್ಶನವಾಗಿದೆ.
ಬಂಡೀಪುರ ಸಫಾರಿಯಲ್ಲಿ ಮಂಗಳವಾರ ಹುಲಿರಾಯ ರಿಲ್ಯಾಕ್ಸ್ ಮೂಡ್ನಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಸಫಾರಿಗರು ಸೆರೆಹಿಡಿದಿದ್ದಾರೆ. ತಂಪಿನ ವಾತಾವರಣದಲ್ಲಿ ಟೈಗರ್ ಕಂಡು ಪ್ರವಾಸಿಗರು ಫಿದಾ ಆಗಿದ್ದು, ಹಚ್ಚ ಹಸಿರಿನ ಕಾಡಿನಲ್ಲಿ ವ್ಯಾಘ್ರನ ಗಾಂಭೀರ್ಯ ನಡೆ ನೋಡಿ ಮುದಗೊಂಡಿದ್ದಾರೆ.
ಚಾಮರಾಜನಗರದಲ್ಲಿ ಹಗಲಿರುಳು ಹುಲಿ ದರ್ಶನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವ್ಯಾಪ್ತಿಯಲ್ಲೂ ಹುಲಿಯೊಂದು ರಾತ್ರಿ ವೇಳೆ ಆರಾಮವಾಗಿ ಆಕಳಿಸಿ ಮೈ ಮುರಿಯುತ್ತಿರುವುದನ್ನು ವಾಹನ ಚಾಲಕರು ಕಣ್ತುಂಬಿಕೊಂಡು, ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ.
ಸದ್ಯ ಈ ಎರಡು ಹುಲಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಗಡಿ ಜಿಲ್ಲೆಯನ್ನು ಹುಲಿಗಳ ನಾಡೆಂದು ನೆಟ್ಟಿಗರು ಕೊಂಡಾಡಿದ್ದಾರೆ.
ಓದಿ:Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್ ಆಕಾರದ ಗೋಳಿ ಮೀನು!