ಗುಂಡ್ಲುಪೇಟೆ :ಕ್ರಿಸ್‌ಮಸ್ ರಜೆ ಹಾಗೂ ವೀಕೆಂಡ್ ಎರಡೂ ಒಟ್ಟಿಗೆ ಬಂದ ಕಾರಣಸತತವಾಗಿ ಮೂರು ದಿನಗಳ ಕಾಲರಜೆ ಇರುವುದರಿಂದ ಜನರು ಪ್ರವಾಸಿ ತಾಣಗಳ ಕಡೆ ಮುಖ ಮಾಡಿದ್ದು, ಇಂದು ರಾಷ್ಟ್ರೀಯ ಹೆದ್ದಾರಿ (ಊಟಿ)ಯ ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಸಾಲು ಸಾಲು ರಜೆ ಊಟಿ ಕಡೆ ಮುಖ ಮಾಡಿದ ಪ್ರವಾಸಿಗರು : ಚೆಕ್ ಪೋಸ್ಟ್ ಬಳಿ ವಾಹನಗಳು ಜಾಮ್ - ತಮಿಳುನಾಡು
ಮೂರು ದಿನಗಳ ರಜೆ ಹಿನ್ನಲೆ ಪ್ರವಾಸಿಗರು ಊಟಿ ಕಡೆ ಮುಖಮಾಡಿದ್ದು, ತಮಿಳುನಾಡಿನ ಕೆಕ್ಕನಹಳ್ಳ ಚೆಕ್ಪೋಸ್ಟ್ ಬಳಿ ವಾಹನಗಳ ಇ-ಪಾಸ್ ಪರಿಶೀಲನೆಗೆ ಸಮಯ ಹಿಡಿಯುವುದರಿಂದ ಸುಮಾರು ಕಿಲೋಮೀಟರ್ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ..
ವಾಹನಗಳು ಜಾಮ್
ತಮಿಳುನಾಡು ಪ್ರವೇಶ ಪಡೆಯಬೇಕಾದ್ರೆ ಇ-ಪಾಸ್ ಅಗತ್ಯ, ಪಾಸ್ ಇಲ್ಲದೆ ವಾಹನಗಳನ್ನು ತಮಿಳುನಾಡಿನ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಬಂಡೀಪುರದ ಬಳಿ ಇರುವ ಮೇಲುಕಾಮನಹಳ್ಳಿ ಚೆಕ್ಪೋಸ್ಟ್ನಲ್ಲಿ ಪಾಸ್ ಇದ್ದರೆ ಮಾತ್ರವೇ ವಾಹನಗಳನ್ನು ಒಳಗೆ ಬಿಡಲಾಗುತ್ತಿದೆ.
ಆದರೂ ಅನೇಕರು ಪ್ರಯಾಣ ಮಾಡುವ ಮಾರ್ಗ ಮದ್ಯದಲ್ಲಿ ಆನ್ಲೈನ್ ಮುಖಂತರ ಪಾಸ್ ಪಡೆದು ಹೋಗುತ್ತಾರೆ. ತಮಿಳುನಾಡಿನ ಕೆಕ್ಕನಹಳ್ಳ ಚೆಕ್ಪೋಸ್ಟ್ ಬಳಿ ಪಾಸ್ ಪರಿಶೀಲನೆ ಮತ್ತು ತಪಾಸಣೆಗೆ ಸಮಯ ಹಿಡಿಯುವುದರಿಂದ ವಾಹನಗಳು ಸುಮಾರು ಕಿಲೋಮೀಟರ್ವರೆಗೂ ಸಾಲುಗಟ್ಟಿ ನಿಂತಿದ್ದವು.