ಕರ್ನಾಟಕ

karnataka

ETV Bharat / state

ಚಾಮರಾಜನಗರ ಗಡಿಯಲ್ಲಿ ತಮಿಳು ನಾಮಫಲಕ ತೆರವುಗೊಳಿಸಿದ ವಾಟಾಳ್ ನಾಗರಾಜ್! - vatal nagraj removes other language nameboards

ಚಾಮರಾಜನಗರ ತಾಲೂಕಿನ ಪುಣಜನೂರು ಹಾಗೂ ಕೋಳಿಪಾಳ್ಯ ನಡುವೆ ಹೆದ್ದಾರಿ ಪ್ರಾಧಿಕಾರ ಹಾಗೂ ತಮಿಳುನಾಡಿನ ಸರ್ಕಾರ ಅಳವಡಿಸಿದ್ದ ತಮಿಳು ನಾಮಫಲಕಗಳನ್ನು ಕನ್ನಡಪರ ಹೋರಾಟಗಾರ ವಾಟಾಳ್​​ ನಾಗರಾಜ್​ ಹಾಗೂ ಬೆಂಬಲಿಗರು ತೆರವುಗೊಳಿಸಿದ್ದಾರೆ.

vatal nagraj removes tamil nameboards news
ತಮಿಳು ನಾಮಫಲಕಗಳನ್ನು ಕಿತ್ತೆಸೆದ ವಾಟಾಳ್ ನಾಗರಾಜ್

By

Published : Jan 10, 2021, 7:13 PM IST

ಚಾಮರಾಜನಗರ:ಕರ್ನಾಟಕ ವ್ಯಾಪ್ತಿಯಲ್ಲಿ ಇದ್ದ ತಮಿಳು ನಾಮಫಲಕಗಳನ್ನು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ತೆರವುಗೊಳಿಸಿ ಆಕ್ರೋಶ ಹೊರಹಾಕಿದರು.

ತಮಿಳು ನಾಮಫಲಕಗಳನ್ನು ತೆರವುಗೊಳಿಸಿದ ವಾಟಾಳ್ ನಾಗರಾಜ್
ಚಾಮರಾಜನಗರ ತಾಲೂಕಿನ ಪುಣಜನೂರು ಹಾಗೂ ಕೋಳಿಪಾಳ್ಯ ನಡುವೆ ಹೆದ್ದಾರಿ ಪ್ರಾಧಿಕಾರ ಹಾಗೂ ತಮಿಳುನಾಡಿನ ಸರ್ಕಾರ ಅಳವಡಿಸಿದ್ದ ತಮಿಳು ನಾಮಫಲಕಗಳನ್ನು ಬೆಂಬಲಿಗರೊಟ್ಟಿಗೆ ಸೇರಿ ತೆರವುಗೊಳಿಸಿ, ರಾಜ್ಯಾದ್ಯಂತ ಗಡಿಯಲ್ಲಿರುವ ಅನ್ಯ ಭಾಷಾ ಬೋರ್ಡ್​ಗಳನ್ನು ಕಿತ್ತೆಸೆಯುವುದಾಗಿ ಎಚ್ಚರಿಸಿದರು. ಇದಕ್ಕೂ ಮುನ್ನ ಚಾಮರಾಜನಗರ ರೈಲ್ವೆ ನಿಲ್ದಾಣ ಮುಂಭಾಗ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಸರ್ಕಾರದ ಪ್ರತಿಕೃತಿ ದಹಿಸಿ ಸಿಎಂ ಬಿಎಸ್​ವೈ ವಿರುದ್ಧ ಆಕ್ರೋಶ ಹೊರಹಾಕಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಸರ್ಕಾರ ಕೂಡಲೇ ಪ್ರಾಧಿಕಾರ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details