ಚಾಮರಾಜನಗರ: ಕೆಲದಿನಗಳ ಹಿಂದೆಯಷ್ಟೇ ತಾಳವಾಡಿ-ಕರ್ನಾಟಕ ಗಡಿಯಲ್ಲಿದ್ದ ತಮಿಳು ನಾಮಫಲಕಗಳನ್ನು ಕಿತ್ತೆಸೆದಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಇಂದು ಕೂಡ ಕೊಂಗಳ್ಳಿ ಬೆಟ್ಟ ರಸ್ತೆಯಲ್ಲಿನ ತಮಿಳು ನಾಮಫಲಕಗಳನ್ನು ತೆರವು ಮಾಡಿದ್ದಾರೆ.
ತಮಿಳು ನಾಮಫಲಕಗಳನ್ನು ಕಿತ್ತೆಸೆದ ವಾಟಾಳ್ ನಾಗರಾಜ್ ಚಾಮರಾಜನಗರ ತಾಲೂಕಿನ ಅರಕಲವಾಡಿ ಸಮೀಪ ಇರುವ ಎತ್ತಿಗಟ್ಟಿ ಬೆಟ್ಟದ ರಸ್ತೆಯ ತಮಿಳುನಾಡು ಗಡಿಯಲ್ಲಿ ಹೆದ್ದಾರಿ ಪ್ರಾಧಿಕಾರ ಹಾಕಿದ್ದ ತಮಿಳು ನಾಮಫಲಕಗಳನ್ನು ತೆರವು ಮಾಡಿದ್ದಾರೆ.
ಓದಿ:ಚಾಮರಾಜನಗರ ಗಡಿಯಲ್ಲಿ ತಮಿಳು ನಾಮಫಲಕ ತೆರವುಗೊಳಿಸಿದ ವಾಟಾಳ್ ನಾಗರಾಜ್!
ಕರ್ನಾಟಕಕ್ಕೆ ಒಳಪಡುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಅನ್ಯರಾಜ್ಯಗಳ ನಾಮಫಲಕ ಇರಬಾರದು. ಎಷ್ಟೇ ಬೆದರಿಕೆ ಕರೆಗಳು ಬಂದರೂ ಕನ್ನಡಕ್ಕಾಗಿ ಹೋರಾಡುತ್ತೇನೆ, ನಾಮಫಲಕ ತೆರವು ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ. ತಾಳವಾಡಿ ನಮ್ಮದು, ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲವೂ ನಮ್ಮದು ಸಂಪೂರ್ಣ ಕನ್ನಡಿಗರೇ ಇರುವ ಈ ಪ್ರದೇಶ ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯಿಸಿದರು.