ಚಾಮರಾಜನಗರ:ರಮೇಶ್ ಜಾರಕಿಹೊಳಿ ಸಿಡಿ ಜೊತೆ ಯಡಿಯೂರಪ್ಪ ಸಿಡಿಯ ಬಗ್ಗೆಯೂ ಚರ್ಚೆಯಾಗಲಿ. ಸದನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕಿತ್ತು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಜಾರಕಿಹೊಳಿ ಕನ್ನಡ ವಿರೋಧಿ. ಅವರು ಕನ್ನಡಿಗರನ್ನು ಬೈದಿದ್ದಾರೆ. ಅವರೊಬ್ಬ ಮರಾಠಿ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು. 6 ಜನ ಮಂತ್ರಿಗಳು ನ್ಯಾಯಾಲಯಕ್ಕೆ ತೆರಳಿದ್ದಾರೆ. ಅದರಲ್ಲಿ ಒಬ್ಬ ಮಂತ್ರಿ ಸಿಡಿ ಬಂದಿದೆ. ಸಿಡಿಯನ್ನು ಪೊಲೀಸ್ ಸ್ಟೇಷನ್ಗೆ ಕೊಟ್ಟು ಹಿಂಪಡೆಯುತ್ತಾರೆ. ಇದಾದ ಮೇಲೆ ಅವರ ಅಣ್ಣ-ತಮ್ಮ ಸೇರಿಕೊಳ್ಳುತ್ತಾರೆ ಎಂದರು.
ಸಿಡಿ ಪ್ರಕರಣ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ. ಸಿಡಿ ವಿಚಾರವನ್ನು ಶಾಸನ ಸಭೆಯಲ್ಲಿ ಚರ್ಚೆಗೆ ತರುವಲ್ಲಿ ವಿರೋಧ ಪಕ್ಷ ಸಂಪೂರ್ಣ ವಿಫಲವಾಗಿದೆ. ಕಾಗೇರಿ ಅವರಿಗೆ ಆ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.
ಚಾಮರಾಜನಗರಕ್ಕೆ ಯಡಿಯೂರಪ್ಪ ಬರ್ತಾನೂ ಇಲ್ಲ- ಅನುದಾನವನ್ನೂ ಕೊಡ್ತಿಲ್ಲ. ಸಿಕ್ಕ ಸಿಕ್ಕ ಜಾತಿಗೆಲ್ಲಾ ಪ್ರಾಧಿಕಾರ ರಚಿಸಿ ಹಣ ಕೊಡುತ್ತಾ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದು ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು. ಯಡಿಯೂರಪ್ಪ ಸರ್ವಾಧಿಕಾರಿ ಆಗಿದ್ದಾರೆ. ಅಧಿಕಾರ ಹಿಡಿದು ದೌಲತ್ತು ಪ್ರದರ್ಶನ ಮಾಡುತ್ತಿದ್ದಾರೆ. ಮಂತ್ರಿಗಳು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದೇನೆ, ಹೆಚ್ಡಿಕೆ ಬಗ್ಗೆ ಗೌರವ ಇದೆ: ಮಧು ಬಂಗಾರಪ್ಪ