ಚಾಮರಾಜನಗರ:ವಿಧಾನ ಪರಿಷತ್ ಚುನಾವಣೆಯಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಒಂದು ವೋಟ್ಗೆ ಒಂದು ಲಕ್ಷ ರೂ.ವರೆಗೂ ಕೊಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ, ಹೋರಾಟದ ಹಿನ್ನೆಲೆ ಇಲ್ಲದವರಿಗೆ, ಹಣವಂತರಿಗೆ ಪಕ್ಷಗಳು ಮಣೆ ಹಾಕಿ ಟಿಕೆಟ್ ನೀಡಿವೆ. ಒಂದು ವೋಟಿಗೆ ಒಂದು ಲಕ್ಷ ರೂ. ಕೊಡುತ್ತಿದ್ದು, ಈ ಚುನಾವಣೆಯಲ್ಲಿ ಏನಿಲ್ಲವೆಂದರೂ ಎರಡೂವರೆ ಸಾವಿರ ಕೋಟಿ ರೂ. ಖರ್ಚಾಗುತ್ತಿದೆ ಎಂದು ಅಭಿಪ್ರಾಯಟ್ಟರು.
ಒಂದು ಮತ ಮಾತ್ರ ಹಾಕಿ ಎಂದು ರಾಜಕೀಯ ಪಕ್ಷಗಳು ಹೇಳುವ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಮತದಾರರಿಗೆ ಇರುವ ಇನ್ನೊಂದು ಮತ ಏನು ಮಾಡಬೇಕು, ನಾನಂತೂ ಯಾರಿಗೂ ಒಂದು ರೂ. ಕೊಟ್ಟಿಲ್ಲ ನನ್ನ ಬಳಿ ಯಾರೂ ಹಣವನ್ನು ಕೇಳಿಲ್ಲ. ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತಿದ್ದೇನೆ ಎಂದರು.
ಕಾಂಗ್ರೆಸ್ಗೆ ನನ್ನ ಮೇಲೆ ಪ್ರೀತಿ ಇದೆ. ಈ ಚುನಾವಣೆಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇನೆ. ಎಲ್ಲ ಗ್ರಾ.ಪಂ. ಸದಸ್ಯರನ್ನು ಭೇಟಿ ಮಾಡಿದ್ದು, ಹಲವರು ಮೊದಲ ಪ್ರಾಶಸ್ತ್ಯ ಕೆಲವರು ಎರಡನೇ ಪ್ರಾಶಸ್ತ್ಯ ಮತವನ್ನು ಕೊಡುತ್ತೇನೆಂದು ಭರವಸೆ ನೀಡಿದ್ದು ಈ ಬಾರಿ ಪರಿಷತ್ ಗೆ ಹೋಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬಿಜೆಪಿಗೆ ಮರ್ಯಾದಸ್ತರನ್ನ ಮಾತ್ರ ಕರೆಯುತ್ತೇವೆ, ಡಿಕೆಶಿ ಯಾರೂ ಕರೆದಿಲ್ಲ: ಗೋ.ಮಧುಸೂಧನ್