ಕರ್ನಾಟಕ

karnataka

ETV Bharat / state

ಈಟಿವಿ ಭಾರತ ವರದಿಗೆ ವಾಟಾಳ್ ಸ್ಪಂದನೆ.. ನೀರು ಕೊಡದಿದ್ದರೆ ಸತ್ಯಾಗ್ರಹದ ಎಚ್ಚರಿಕೆ - ಜಿಲ್ಲಾಡಳಿತ ಭವನ

ಗ್ರಾಮೀಣ ಭಾಗಗಳಿಂದ ಚಾಮರಾಜನಗರಕ್ಕೆ ಬರುವ ಜನರು ನೀರು ಕುಡಿಯಲು ಎಲ್ಲಿಗೆ ಹೋಗಬೇಕು..? ನಗರಸಭೆ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶಕ್ತಿ ಮೀರಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

Vatal Nagaraj
ವಾಟಾಳ್ ನಾಗರಾಜ್

By

Published : Mar 11, 2021, 5:16 PM IST

ಚಾಮರಾಜನಗರ: ಬಿಸಿಲ ಬೇಗೆಗೆ ತತ್ತರಿಸುತ್ತಿರುವ ಗಡಿಜಿಲ್ಲೆ ಜನರ ಸಮಸ್ಯೆಯ ಕುರಿತಂತೆ ಈಟಿವಿ ಭಾರತ ಪ್ರಕಟಿಸಿದ್ದ ವರದಿಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಂದಿಸಿ, ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಕುರಿತು ಈಟಿವಿ ಭಾರತ 'ಏರಿದ ತಾಪಮಾನಕ್ಕೆ ಚಾಮರಾಜನಗರ ಜನ ಕಂಗಾಲು... ಸಾರ್ವಜನಿಕ ಸ್ಥಳಗಳಲ್ಲಿ ಸಿಗ್ತಿಲ್ಲ ಕುಡಿವ ನೀರು' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು.

ಈಟಿವಿ ಭಾರತ ವರದಿಗೆ ವಾಟಾಳ್ ಸ್ಪಂದನೆ

ಈ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಭಾಗಗಳಿಂದ ಚಾಮರಾಜನಗರಕ್ಕೆ ಬರುವ ಜನರು ನೀರು ಕುಡಿಯಲು ಎಲ್ಲಿಗೆ ಹೋಗಬೇಕು..? ನಗರಸಭೆ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶಕ್ತಿ ಮೀರಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಡಳಿತ ಭವನದಲ್ಲೇ ಕುಡಿವ ನೀರು ಸಿಗದಿರುವುದು ವಿಪರ್ಯಾಸ, ಒಂದು ವಾರದ ಒಳಗೆ ಚಾಮರಾಜನಗರದ ಉದ್ದಗಲಕ್ಕೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಗಡವು ನೀಡಿದರು.

ಒಂದು ವಾರದೊಳಗೆ ಕುಡಿವ ನೀರು ಕೊಡದಿದ್ದರೆ ಜಿಲ್ಲಾಡಳಿತ ಭವನದಲ್ಲಿ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:ಏರಿದ ತಾಪಮಾನಕ್ಕೆ ಚಾಮರಾಜನಗರ ಜನ ಕಂಗಾಲು‌.‌. ಸಾರ್ವಜನಿಕ ಸ್ಥಳಗಳಲ್ಲಿ ಸಿಗ್ತಿಲ್ಲ ಕುಡಿವ ನೀರು..!

ABOUT THE AUTHOR

...view details