ಚಾಮರಾಜನಗರ:ಬಂಡಿಪುರ-ವಯನಾಡು ಮಾರ್ಗದ ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸಬೇಕೆಂದು ಒತ್ತಾಯಿಸಿ, ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಕೇರಳ ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.
ಕಾಡಿನ ಮಧ್ಯೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ, ಅಂಡರ್ ಗ್ರೌಂಡ್ ನಿರ್ಮಾಣ ಎಂದು ಕೇರಳ ಸರ್ಕಾರ ತೂರಿಬಿಡುತ್ತಿರುವ ಯೋಜನೆಗಳು ವನ್ಯಜೀವಿಗಳಿಗೆ ಮಾರಕವಾಗಿದೆ. ಇದರ ಹಿಂದೆ ಟಿಂಬರ್ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಿದರು.
ಕೇರಳ ಗಡಿಯಲ್ಲಿ ವಾಟಾಳ್ ರಸ್ತೆತಡೆ ಪಿಣರಾಯ್ ವಿಜಯನ್ ಕೊಡಗಿನ ಮೂಲಕ ಹೊಸ ರಸ್ತೆ ತೋರಿಸುತ್ತಿದ್ದಾರೆ. ಇದರಿಂದ ನಮ್ಮ ಭಾಗದ ಕಾಡೇ ಹೆಚ್ಚು ನಾಶವಾಗಲಿದೆ. ಈಗ ವಯನಾಡು ಭಾಗದಲ್ಲಿ ಚಳವಳಿ, ಗಲಾಟೆ ಶುರು ಮಾಡಿದ್ದಾರೆ. ರಾಹುಲ್ ಗಾಂಧಿ ರಾತ್ರಿ ಸಂಚಾರವನ್ನು ಬಿಡಿಸುವ ಬಗ್ಗೆ ಮಾತನಾಡಿದ್ದಾರೆ. ಇವರುಗಳಿಗೆ ಪ್ರಾಣಿ ಬೇಕಿಲ್ಲ, ಕಾಡು ಬೇಕಿಲ್ಲ ಎಂದು ಕಿಡಿಕಾರಿದರು.
20 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ವಾಟಾಳ್, ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದೇ ವೇಳೆ ಅವರನ್ನು ಪೊಲೀಸರು ಬಂಧಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.