ಚಾಮರಾಜನಗರ:ದಿನಸಿ ಪದಾರ್ಥಗಳಿಗೂ ಜಿಎಸ್ಟಿ ಹೇರಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಮೂತ್ರ ವಿಸರ್ಜನೆಗೂ ಇನ್ಮುಂದೆ ಜಿಎಸ್ಟಿ ಕಟ್ಟಿಬೇಕಾಗುತ್ತದೆ. ಎಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಮಾಡ್ತೇವೋ ಅಷ್ಟು ಟ್ಯಾಕ್ಸ್ ಕಟ್ಟಬೇಕು, ಕಟ್ಟದಿದ್ದರೇ ಪೊಲೀಸರು ಬಂಧಿಸಲಿದ್ದಾರೆ. ಇದನ್ನು ಅಶ್ಲೀಲವಾಗಿ ಹೇಳುತ್ತಿಲ್ಲ, ಪರಿಸ್ಥಿತಿ ಇಷ್ಟು ಗಂಭೀರವಾಗಿದೆ ಎಂದರು.
ಆಹಾರ ಪದಾರ್ಥಗಳ ಮೇಲೆ ಜಿಎಸ್ಟಿ ಹೇರಿರುವುದು ಸೂಕ್ತವಲ್ಲ, ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಇಳಿದರೇ ದೇಶ ಸುಭಿಕ್ಷವಾಗಲಿದೆ. ಅವರು ಅಂಬಾನಿ-ಅದಾನಿ ಪರ, ಬಡವರ ಪರ ಎಂಬ ಮುಖವಾಡ ಧರಿಸಿದ್ದಾರೆ ಎಂದು ಆರೋಪಿಸಿದರು.