ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕರೆ ನೀಡಿದ್ದ ಬಂದ್ ವಿಫಲಗೊಳಿಸಲು ಯಡಿಯೂರಪ್ಪ ಸತತ ಪ್ರಯತ್ನ ನಡೆಸಿದರು. ಪೊಲೀಸರು ಬಿಎಸ್ವೈ ಅವರ ಪಕ್ಷದವರಾಗಿದ್ದರು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ಭಾರತ್ ಬಂದ್ಗೆ ವಾಟಾಳ್ ಬೆಂಬಲ: ರಾಜ್ಯ ಬಂದ್ ವಿಫಲಕ್ಕೆ ಪೊಲೀಸರ ವಿರುದ್ಧ ಆಕ್ರೋಶ - Vatal Nagaraj talk about karnataka Bandh
ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಅಂದು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಲ್ಲರನ್ನು ಹೆದರಿಸಿ ಮಾರ್ಕೆಟ್ಗಳನ್ನು ತೆರೆಸಿದರು. ಪೊಲೀಸರು ಇದರ ಜವಾಬ್ದಾರಿ ಹೊತ್ತಿದ್ದರು. ಓಲಾ- ಉಬರ್ ಕೂಡ ಬೆಂಬಲ ನೀಡಿತ್ತು. ಸರ್ಕಾರಕ್ಕೆ ಹೆದರಿ ಕೊನೆಗೆ ಅವರು ರಸ್ತೆಗಿಳಿದರು. ಕಮ್ಯುನಿಸ್ಟ್ ಪಕ್ಷ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸುವ ಮೂಲಕ ಬಿಜೆಪಿ ತೀರ್ಮಾನ ಬೆಂಬಲಿಸಿ ತಮ್ಮ ಸಿದ್ಧಾಂತಕ್ಕೆ ದ್ರೋಹ ಬಗೆದರು ಎಂದು ಕಿಡಿಕಾರಿದರು.
ಬೆಳಗಾವಿ ಚುನಾವಣೆಯಲ್ಲಿ ರಕ್ತ ಸಂಬಂಧಿಗಳನ್ನು ಗೆಲ್ಲಿಸಲು ಯಡಿಯೂರಪ್ಪ ಕರ್ನಾಟಕವನ್ನು ಹರಾಜಿಗೆ ಹಾಕಿದರು. ಪ್ರಾಧಿಕಾರ ರದ್ದಾಗುವ ತನಕ ಹೋರಾಟ ನಿಲ್ಲುವುದಿಲ್ಲ. ಬುಧವಾರದಂದು ಕನ್ನಡಪರ ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟ ರೂಪಿಸಲಾಗುವುದು. ಈ ವಿಚಾರದಲ್ಲಿ ಜೈಲಿಗೆ ಹೋಗಲು ಸಿದ್ಧ ಎಂದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 5-6 ದಿನ ಬಂದ್ ಮಾಡಿದ್ದೇವೆ. ಆದರೆ, ಅವರು ಎಂದೂ ಹೋರಾಟಕ್ಕೆ ಅಡ್ಡಿಪಡಿಸಲಿಲ್ಲ ಎಂದು ಬಿಎಸ್ವೈ ವಿರುದ್ಧ ಕಿಡಿಕಾರಿದರು.
ಇದೇ ವೇಳೆ, ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಅಂದು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದರು.