ಚಾಮರಾಜನಗರ: ನನಗೆ ಒಂದು ಮತವನ್ನು ಕೊಡುವ ಮೂಲಕ ಪದವೀಧರರು ತಮ್ಮ ಆದರ್ಶ ಪ್ರದರ್ಶಿಸಬೇಕು. ತಮ್ಮ ಮತವನ್ನು ಆದರ್ಶ, ತತ್ವ, ಸಿದ್ಧಾಂತಕ್ಕೆ ಬದ್ಧನಾಗಿರುವ ನನಗೆ ಕೊಟ್ಟು ಆಶೀರ್ವದಿಸಬೇಕು ಎಂದು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ನನಗೆ ಒಂದು ಮತ ಕೊಟ್ಟು ಆದರ್ಶ ಪ್ರದರ್ಶಿಸಿ: ಪದವೀಧರರಿಗೆ ವಾಟಾಳ್ ಮನವಿ - ಚಾಮರಾಜನಗರ
ವಿಧಾನ ಪರಿಷತ್ನ ಘನತೆ, ಗಾಂಭೀರ್ಯವನ್ನು ಉಳಿಸಬೇಕಾದ ಪದವೀಧರರು ತಮ್ಮ ಮತವನ್ನು ಆದರ್ಶ, ತತ್ವ, ಸಿದ್ಧಾಂತಕ್ಕೆ ಬದ್ಧನಾಗಿರುವ ನನಗೆ ಕೊಟ್ಟು ಆಶೀರ್ವದಿಸಬೇಕು ಎಂದು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ವಾಟಾಳ್ ಮನವಿ
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದವೀಧರರು ಆದರ್ಶ ಯಾವುದೇ ಆಸೆಗೂ ಒಳಗಾಗಬಾರದು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಾದವರು ಪದವೀಧರರು. ನಿಮ್ಮ ಆದರ್ಶವನ್ನು ನೋಡಿ ನಾನು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಪದವೀಧರರು ಪ್ರಾಮಾಣಿಕವಾಗಿ ನನಗೆ ಒಂದು ಮತವನ್ನು ಕೊಡಕು ಎಂದು ಕೇಳಿಕೊಂಡರು.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸುತ್ತಿರುವ ಜೆಡಿಎಸ್