ಬಿಎಸ್ವೈ ಪರಭಾಷೆ ಏಜೆಂಟ್, ಡಿ.5ಕ್ಕೆ ಸಂಪೂರ್ಣ ಬಂದ್ ಶತಃಸಿದ್ಧ : ವಾಟಾಳ್ ನಾಗರಾಜ್ ಗುಡುಗು - Vatal Nagaraj barrage against BS Y in Chamarajanagar
ಮರಾಠ ನಿಗಮ ಮಾಡಿದ ಕೂಡಲೇ ಬೇರೆಲ್ಲರೂ ನಿಗಮ ರಚಿಸಬೇಕು ಎಂದು ಒತ್ತಾಯಿಸುತ್ತಿರಲು ಯಡಿಯೂರಪ್ಪ ಮಾಡಿರುವ ಅನಾಹುತವೇ ಕಾರಣ ಎಂದರು. ನಾಳೆ ಮಧ್ಯಾಹ್ನದ ತನಕ ನಿಗಮ ರದ್ದುಗೊಳಿಸಲು ಕನ್ನಡ ಒಕ್ಕೂಟ ಗಡುವು ನೀಡಿದ್ದವು. ಆದರೆ, ಸರ್ಕಾರದಿಂದ ಯಾವುದೇ ಸೂಚನೆ ಬಾರದಿರುವುದರಿಂದ ಸಮಗ್ರ ಕರ್ನಾಟಕ ಬಂದ್ ಆಗಲಿದೆ..
ವಾಟಾಳ್ ನಾಗರಾಜ್
ಚಾಮರಾಜನಗರ :ಬಂದ್‌ಗೆ ಅವಕಾಶ ನೀಡುವುದಿಲ್ಲ ಎನ್ನಲು ಯಡಿಯೂರಪ್ಪ ಯಾರು? ಅವರು ಪರಭಾಷೆಯ ಏಜೆಂಟ್ ಆಗಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಮರಾಠ ನಿಗಮ ಮಾಡಿದ ಕೂಡಲೇ ಬೇರೆಲ್ಲರೂ ನಿಗಮ ರಚಿಸಬೇಕು ಎಂದು ಒತ್ತಾಯಿಸುತ್ತಿರಲು ಯಡಿಯೂರಪ್ಪ ಮಾಡಿರುವ ಅನಾಹುತವೇ ಕಾರಣ ಎಂದರು. ನಾಳೆ ಮಧ್ಯಾಹ್ನದ ತನಕ ನಿಗಮ ರದ್ದುಗೊಳಿಸಲು ಕನ್ನಡ ಒಕ್ಕೂಟ ಗಡುವು ನೀಡಿದ್ದವು. ಆದರೆ, ಸರ್ಕಾರದಿಂದ ಯಾವುದೇ ಸೂಚನೆ ಬಾರದಿರುವುದರಿಂದ ಸಮಗ್ರ ಕರ್ನಾಟಕ ಬಂದ್ ಆಗಲಿದೆ. ಸಂಪೂರ್ಣ ಯಶಸ್ವಿಯಾಗಲಿದೆ. ಎಲ್ಲಾ ಅಂತರರಾಜ್ಯ ಗಡಿಗಳು, ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಲಿವೆ.
ವಕೀಲರ ಸಂಘ ಸೇರಿದಂತೆ 1050 ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಟ್ಟಿವೆ. ಡಿ.5ರಂದು ಕುಡಿಯಲು ನೀರು ಸಿಗದ ರೀತಿ ರಾಜ್ಯ ಸ್ತಬ್ಧ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರ ಬಂದ್ ಮಾಡಲಾಗಲ್ಲ ಎಂದು ಹೇಳಿರುವ ಯತ್ನಾಳ್-ಪತ್ನಾಳ್ ತನಗೆ ಗೊತ್ತಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.