ಕರ್ನಾಟಕ

karnataka

ETV Bharat / state

ಚಾಮರಾಜನಗರ: ವ್ಯಾನ್- ಬೈಕ್ ಡಿಕ್ಕಿಯಾಗಿ ಇಬ್ಬರು ಸಾವು, ನಾಲ್ವರು ಗಂಭೀರ - chamrajnagar

ವ್ಯಾನ್ ಹಾಗೂ ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗೇಟ್ ಬಳಿ ಈ ದುರ್ಘಟನೆ ನಡೆದಿದೆ.

chamrajnagar
ವ್ಯಾನ್- ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

By

Published : Jan 18, 2021, 7:18 PM IST

ಚಾಮರಾಜನಗರ: ಮದುವೆ ಮುಗಿಸಿ ಊರಿಗೆ ತೆರಳುತ್ತಿದ್ದ ತೂಫಾನ್ ವ್ಯಾನ್ ಹಾಗೂ ಟಿವಿಎಸ್ ಎಕ್ಸ್ ಎಲ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತಗ್ಗಲೂರು ಗೇಟ್ ಬಳಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಬೈಕ್ ಸವಾರ ಸಿದ್ದಮಲ್ಲಪ್ಪ(48) ಹಾಗೂ ವ್ಯಾನಿನಲ್ಲಿದ್ದ ತಮಿಳುನಾಡಿನ ಅಮ್ಮಕ್ಕಮ್ಮ(62) ಮೃತರು‌. ಸಿದ್ದಮಲ್ಲಪ್ಪ ಹಾಗೂ ಮಂತ್ರಿ ನಾಗಪ್ಪ ಎಂಬವರು ಬೆಟ್ಟದಮಾದಳ್ಳಿಯತ್ತ ತೆರಳಲು ಬೈಕ್ ತಿರುಗಿಸಿದ ವೇಳೆ ಮೈಸೂರಿನಲ್ಲಿ ಮದುವೆ ಸಮಾರಂಭ ಮುಗಿಸಿಕೊಂಡು ಊಟಿಯತ್ತ ತೆರಳುತ್ತಿದ್ದ ವ್ಯಾನ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:ಅಫ್ಘನ್​ನಲ್ಲಿ ಮತ್ತೆ ತಾಲಿಬಾನ್ ದಾಳಿ: 8 ಮಂದಿ ಭದ್ರತಾ ಸಿಬ್ಬಂದಿ ಸಾವು

ಈ ವೇಳೆ ಸಿದ್ದಮಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಮಂತ್ರಿ ನಾಗಪ್ಪ ಎಂಬವರ ಕಾಲು ತುಂಡಾಗಿದೆ. ಡಿಕ್ಕಿಯಾದ ರಭಸಕ್ಕೆ ವ್ಯಾನ್ ಪಲ್ಟಿಯಾಗಿ ಸೇತುವೆಗೆ ಅಪ್ಪಳಿಸಿದ್ದು ವ್ಯಾನಿನಲ್ಲಿದ್ದ ಅಮ್ಮಕ್ಕಮ್ಮ ಸ್ಥಳದಲ್ಲೇ ಅಸುನೀಗಿದ್ದಾರೆ. ಚಾಲಕ ಸೇರಿದಂತೆ 4 ಮಂದಿಗೆ ಗಂಭೀರ ಗಾಯಗಳಾಗಿದ್ದು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details