ಚಾಮರಾಜನಗರ:ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಒತ್ತಾಯಿಸಿದರು.
ಫೋನ್ ಕದ್ದಾಲಿಕೆ.. ಹೆಚ್ ಡಿಕೆ ವಿರುದ್ಧ ಸಮಗ್ರ ತನಿಖೆಗೆ ಸಂಸದ ವಿ ಶ್ರೀನಿವಾಸ ಪ್ರಸಾದ್ ಒತ್ತಾಯ.. - ವಿ.ಶ್ರೀನಿವಾಸ ಪ್ರಸಾದ್ ಒತ್ತಾಯ
ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಮಗ್ರ ತನಿಖೆ ಆಗಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಒತ್ತಾಯಿಸಿದ್ದಾರೆ.
ಕೊಳ್ಳೇಗಾಲ ನೆರೆ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಫೋನ್ ಕದ್ದಾಲಿಕೆ ಬಹುದೊಡ್ಡ ಅಪರಾಧ. ಕುಮಾರಸ್ವಾಮಿಯವರೇ ಫೋನ್ ಕದ್ದಾಲಿಕೆಗೆ ಹೊಣೆಗಾರರು ಎಂದು ಕಿಡಿಕಾರಿದರು.
ಎಲ್ಲರೂ ಕುಮಾರಸ್ವಾಮಿಯವರ ಮೇಲೆ ನೇರ ಆರೋಪ ಮಾಡಿದ್ದಾರೆ. ಫೋನ್ ಕದ್ದಾಲಿಕೆ ಮೇಲೆ ಸಮಗ್ರ ತನಿಖೆಯಾಗಬೇಕು. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಕುಮಾರಸ್ವಾಮಿ ಈಗ ಮಾಜಿಯಾಗಿದ್ದಾರೆ. ಈಗ ಯಾವ ರೀತಿ ತನಿಖೆ ನಡೆಯುತ್ತೋ ನೋಡೋಣ ಎಂದರು. ಇದೇ ವೇಳೆನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಭರವಸೆ ನೀಡಿದರು.