ಚಾಮರಾಜನಗರ: ಗಡಿಜಿಲ್ಲೆಯ ನೂತನ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಇಂದು ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಪ್ರೇಮ ಮೆರೆದರು.
ಸಂಸತ್ತಿನಲ್ಲಿ ಸಂಸದರ ಕನ್ನಡಪ್ರೇಮ.. ಸತತ 6ನೇ ಬಾರಿಯೂ ಕನ್ನಡದಲ್ಲೇ ವಿ.ಶ್ರೀ ಪ್ರಮಾಣವಚನ ! - ಸತತ ಆರನೇ ಬಾರಿಯೂ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ವಿ.ಶ್ರೀ
ಆರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ವಿ.ಶ್ರೀನಿವಾಸಪ್ರಸಾದ್ ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತಿನಲ್ಲಿ ಸಂಸದರ ಕನ್ನಡಪ್ರೇಮ
ಆರನೇ ಬಾರಿಗೆ ಸಂಸದರಾಗಿ ಅಯ್ಕೆಯಾಗಿರುವ ವಿ. ಶ್ರೀನಿವಾಸ ಪ್ರಸಾದ್ ಸಂಸತ್ತಿನಲ್ಲಿ ಕನ್ನಡದಲ್ಲಿ ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು, ಶ್ರೀನಿವಾಸ್ ಪ್ರಸಾದ್ ಮೊದಲನೇ ಬಾರಿ ಸಂಸದರಾಗಿ ಆಯ್ಕೆಯಾದಾಗಲೂ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಮೂಲಗಳು ಖಚಿತಪಡಿಸಿವೆ. ಅಷ್ಟೇ ಅಲ್ಲ, ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗುವ ವೇಳೆಯೂ ಕನ್ನಡದಲ್ಲೇ ಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿದ್ದರು.