ಚಾಮರಾಜನಗರ: 8 ಲಕ್ಷ ಮಂದಿ ಸೇರಿಸಿ ಸಿದ್ದರಾಮೋತ್ಸವ ಮಾಡಿದ ಮೇಲೂ ಕ್ಷೇತ್ರ ಸಿಗದೇ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಅಲೆಮಾರಿಯಾಗಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನ ನೋಡಿದ್ರೆ ನನಗೆ ನಗು ಬರುತ್ತದೆ. ದಾವಣಗೆರೆಯಲ್ಲಿ 6-8 ಲಕ್ಷ ಜನ ಸೇರಿಸಿ ಮೈಸೂರು ಪಾಕ್ ತಿಂದ್ರಿ ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಧೈರ್ಯ ಬಂದಿದ್ಯಾ?, ಅವರು ತಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಲಿ, ರಾಜಕೀಯ ಅಲೆಮಾರಿಯಾಗಿ ಕ್ಷೇತ್ರ ಹುಡುಕಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಇದನ್ನೂ ಓದಿ:ಸಿದ್ದರಾಮೋತ್ಸವ ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸೇರಿಸೋದೊಂದೇ ಬಾಕಿ : ಶ್ರೀನಿವಾಸ ಪ್ರಸಾದ್ ಲೇವಡಿ
ಕೆಲಸ ಮಾಡಿ ಇಲ್ಲವೇ ನಡೀರಿ ಎಂಬ ಕಾಂಗ್ರೆಸ್ ಘೋಷಣೆಗೆ ಪ್ರತಿಕ್ರಿಯಿಸಿದ ಪ್ರಸಾದ್, ಯಾರು ಆಡಳಿತ ನಡೆಸಬೇಕು ಎಂದು ತೀರ್ಮಾನ ಮಾಡಬೇಕಾದವರು ಜನ. ಕಾಂಗ್ರೆಸ್ನವರು ಅವರ ಬಂಡವಾಳ ಅರಿತು ಮಾತನಾಡಲಿ, 28 ಲೋಕಸಭಾ ಕ್ಷೇತ್ರದಲ್ಲಿ ಯಾಕೆ ಅವರು ಒಂದು ಸ್ಥಾನ ಗೆದ್ದರು, ಆಡಳಿತದಲ್ಲಿದ್ದವರನ್ನು ಯಾಕೆ ವಿಪಕ್ಷದಲ್ಲಿ ಕೂರಿಸಿದರು, ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬಂದಿದೆ, ಅವಲೋಕಿಸಿ ಮಾತನಾಡಿ ಎಂದು ಕಿಡಿಕಾರಿದರು.
ಇದೇ ವೇಳೆ, ಅನ್ನಭಾಗ್ಯ ಯೋಜನೆ ಕಡಿತಗೊಳ್ಳಲಿದೆ, ಸರ್ಕಾರದ ಬಳಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿ, ಸಿದ್ದರಾಮಯ್ಯ ಏನು ಜ್ಯೋತಿಷಿನಾ?, ಮಾಜಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಯೋಚಿಸಿ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ-ಜಿ ಟಿ ದೇವೇಗೌಡರದ್ದು ಅಪಹಾಸ್ಯದ ಮೈತ್ರಿ.. ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ..