ಚಾಮರಾಜನಗರ: ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲವಿಲ್ಲ. ಯಡಿಯೂರಪ್ಪ ಅದೃಷ್ಟವಂತರು. ರಾಜ್ಯಕ್ಕೆ ಉತ್ತಮ ಮಳೆ ಬಂದಿದೆ ಎಂದು ಸಚಿವ ಸೋಮಣ್ಣ ಹೇಳಿದರು.
ಕೊಳ್ಳೇಗಾಲ ಪ್ರವಾಹ ಪೀಡಿತ ಪ್ರದೇಶಗಳಾದ ಮುಳ್ಳೂರು, ದಾಸನಪುರ, ಹಳೆ ಅಣಗಳ್ಳಿಗೆ ಸಚಿವರು ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು. ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವುದಾಗಿ ಭರವಸೆ ಇತ್ತರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಾಗದಿರುವ ಯೋಚನೆ ಇತ್ತು. ರಾಜ್ಯಕ್ಕೆ ಮಳೆ ಬಂದ್ದದ್ದನ್ನು ನೋಡಿದರೆ ಯಡಿಯೂರಪ್ಪನವರ ಅದೃಷ್ಟ ಅದು. ಮಳೆಯಿಂದಾಗಿ ಆಲಮಟ್ಟಿ , ಕೆರೆಕಟ್ಟೆ ತುಂಬಿದೆ ಎಂದು ಸಚಿವ ಸೋಮಣ್ಣ ಹೇಳಿದರು.