ಚಾಮರಾಜನಗರ:ಕೋವಿಡ್ ಸಂಕಷ್ಟದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಕ್ಷೇತ್ರಕ್ಕೆ ಬಂದಿಲ್ಲ, ಜನರ ಕಷ್ಟವನ್ನೂ ಸಹ ಕೇಳುತ್ತಿಲ್ಲ ಎಂಬ ಅಸಮಾಧಾನ ಭುಗಿಲೆದ್ದಿದೆ.
ಸಾಮಾಜಿಕ ಜಾಲತಾಣ ಸೇರಿದಂತೆ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಕ್ಷೇತ್ರಕ್ಕೆ ಭೇಟಿ ನೀಡದಿರುವ ಕುರಿತು ಜನರು ಕಿಡಿಕಾರುತ್ತಿದ್ದು ಸುರೇಶ್ ವಾಜಪೇಯಿ ಎಂಬವರು ಇನ್ನು ಎರಡು ಮೂರು ದಿನದಲ್ಲಿ ಬರದಿದ್ದರೇ ಕಾಣೆಯಾಗಿದ್ದಾರೆ ಅಂತಲೇ ದೂರು ನೀಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದಲ್ಲಿ ವಿ.ಶ್ರೀ ವಿರುದ್ಧ ಅಸಮಾಧಾನ ಜನರ ಮತ ಬೇಕು ಜನರ ಕಷ್ಟದ ಮಾತುಗಳನ್ನೇಕೆ ಕೇಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರೇ ಪೋಸ್ಟ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ಬಹಳ ನಿರೀಕ್ಷೆಯಲ್ಲಿಟ್ಟುಕೊಂಡು ಹಿರಿಯರು, ಅನುಭವಿಗಳು ಎಂದು ಗೆಲ್ಲಿಸಿದ್ದೆವು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ, ಸಂಕಷ್ಟದ ಸಮಯದಲ್ಲಿ ಜನರಿಂದ ದೂರವಾಗುವುದು ಸರಿಯಲ್ಲ, ನಮ್ಮ ಕಷ್ಟ ಕೇಳಬೇಕು, ರೈತರ ಪರಿಸ್ಥಿತಿ ಅರಿಯಬೇಕು, ಜಿಲ್ಲಾ ಉಸ್ತುವಾರಿ ಸಚಿವ ಕೊರೊನಾ ಕಾರಣಕ್ಕಾಗಿಯೇ 6 ಬಾರಿ ಭೇಟಿ ನೀಡಿದ್ದಾರೆ. ಆದರೆ, ಸಂಸದರಾಗಿ ಅವರ ಜಿಲ್ಲಾ ಭೇಟಿ ಎರಡಂಕಿ ದಾಟುವುದಿಲ್ಲ ಎಂದು ಜನರು ಕಿಡಿಕಾರಿದ್ದಾರೆ.
ಚಾಮರಾಜನಗರದಲ್ಲಿ ವಿ.ಶ್ರೀ ವಿರುದ್ಧ ಅಸಮಾಧಾನ ಇನ್ನು, ವಿ.ಶ್ರೀ ತಮ್ಮ ಒಂದು ತಿಂಗಳ ವೇತನವಾದ 1 ಕೋಟಿ ರೂ. ಹಾಗೂ ಸಂಸದರ ಅನುದಾನದಿಂದ ನೀಡಿದ್ದಾರೆ. ಡಿಸಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದಿದ್ದಾರೆ ಎಂದು ಸಂಸದರ ಆಪ್ತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.