ಕಸಾಪ ಮಹಾ ಅಧಿವೇಶನದಲ್ಲಿ ಗದ್ದಲ-ಗಲಾಟೆ: ಕೂತ್ಕೋಳಯ್ಯ ಅಂದಿದ್ದಕ್ಕೆ ಕೋಲಾಹಲ! - ರಾಜ್ಯ ಕಸಾಪ ಸ್ವತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಮಹಾ ಅಧಿವೇಶನ ಗದ್ದಲ-ಗಲಾಟೆಯಿಂದಲೇ ಆರಂಭವಾಗಿ ಮಾತಿನ ಚಕಮಕಿಯಿಂದ ಕೋಲಾಹಲಕ್ಕೆ ಸಾಕ್ಷಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
![ಕಸಾಪ ಮಹಾ ಅಧಿವೇಶನದಲ್ಲಿ ಗದ್ದಲ-ಗಲಾಟೆ: ಕೂತ್ಕೋಳಯ್ಯ ಅಂದಿದ್ದಕ್ಕೆ ಕೋಲಾಹಲ!](https://etvbharatimages.akamaized.net/etvbharat/prod-images/768-512-4594871-thumbnail-3x2-sanju.jpg)
ಚಾಮರಾಜನಗರ:ಕನ್ನಡ ಸಾಹಿತ್ಯ ಪರಿಷತ್ತಿನ ಮಹಾ ಅಧಿವೇಶನ ಗದ್ದಲ-ಗಲಾಟೆಯಿಂದಲೇ ಆರಂಭವಾಗಿ ಮಾತಿನ ಚಕಮಕಿಯಿಂದ ಕೋಲಾಹಲಕ್ಕೆ ಸಾಕ್ಷಿಯಾಗಿದೆ.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ 103ನೇ ಮಹಾ ಅಧಿವೇಶನದ ಪ್ರಾರಂಭದಲ್ಲೇ ಎಲ್ಲಾ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಲ್ಲ ಎಂದು ಕೆಲವರು ಧ್ವನಿ ಎತ್ತಿ ಆಕ್ಷೇಪ ಸಲ್ಲಿಸುತ್ತಿದ್ದ ವೇಳೆ ಮಂಡ್ಯ ಕಸಾಪ ಅಧ್ಯಕ್ಷ ರವಿಕುಮಾರ್ ಕೂತ್ಕೋಳಯ್ಯ ಎಂದು ಸದಸ್ಯರೊಬ್ಬರಿಗೆ ಹೇಳಿದ್ದು ಕೋಲಾಹಲಕ್ಕೆ ಕಾರಣವಾಗಿದೆ.
ಕೂತ್ಕೋಳ್ಳಯ್ಯ ಎಂಬ ಮಾತಿನಿಂದ ಕುಪಿತಗೊಂಡ ಇನ್ನಿತರ ಸದಸ್ಯರು ಕಸಾಪ ಪದಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದರು. ಬಳಿಕ, ರವಿಕುಮಾರ್ ತಾವು ಹೇಳಿದ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದರಿಂದ ಸಭೆ ತಣ್ಣಗಾಯಿತು.