ಕರ್ನಾಟಕ

karnataka

ETV Bharat / state

ಟ್ಯಾಂಕ್ ಸ್ವಚ್ಛ ಪ್ರಕರಣ: ಗ್ರಾಮದ ಎಲ್ಲಾ‌ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿದ ತಹಶೀಲ್ದಾರ್​ - etv bharath kannada news

ತಹಶೀಲ್ದಾರ್​ ಬಸವರಾಜು ಅವರು ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಗೆ ನೀರು ಕುಡಿಸಿದ್ದಾರೆ.‌

ತೊಂಬೆಗಳಲ್ಲಿ ನೀರು‌ ಕುಡಿದ ದಲಿತ ಯುವಕರು
ತೊಂಬೆಗಳಲ್ಲಿ ನೀರು‌ ಕುಡಿದ ದಲಿತ ಯುವಕರು

By

Published : Nov 20, 2022, 4:07 PM IST

Updated : Nov 21, 2022, 5:14 PM IST

ಚಾಮರಾಜನಗರ:ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ವಚ್ಛ ಮಾಡಿದ್ದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಎಸಿ ಗೀತಾ ಹುಡೇದ, ಚಾಮರಾಜನಗರ ತಹಶೀಲ್ದಾರ್​​ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದ್ದಾರೆ.

ಸರಗೂರಿನಿಂದ ಬಂದಿದ್ದ ಯುವಕರು "ಮಹಿಳೆ ನೀರು ಕುಡಿದಿದ್ದಕ್ಕೆ ನಿಮ್ಮ ಊರಿನ ಜನರು ಸ್ವಚ್ಛ ಮಾಡಿಸಿದರು" ಎಂದು ಹೆಗ್ಗೋಠಾರ ಗ್ರಾಮದ ಯುವಕನಿಗೆ ತಿಳಿಸಿದ್ದರು. ಆಗ ಯುವಕನು ತಹಶೀಲ್ದಾರ್​ ಮುಂದೆ ಅಮಾನವೀಯ ಘಟನೆ ನಡೆಯಿತು ಎಂದು ಸರಗೂರು ಗ್ರಾಮದವರು ಮಾಹಿತಿ ನೀಡಿರುವ ಬಗ್ಗೆ ತಿಳಿಸಿದ್ದಾರೆ.

ದಲಿತ ಯುವಕರಿಗೆ ನೀರು ಕುಡಿಸಿದ ತಹಶೀಲ್ದಾರ್​:ಸಭೆ ಬಳಿಕ ತಹಶೀಲ್ದಾರ್​ ಬಸವರಾಜು ಅವರು ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ.‌ ಜೊತೆಗೆ, ತೊಂಬೆಗಳ ಮೇಲೆ' ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು' ಎಂದು ಬರೆಸಿದ್ದಾರೆ.

ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು, ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆ ಮಹಿಳೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಗ್ರಾಮದ ಎಲ್ಲಾ‌ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿದ ತಹಶೀಲ್ದಾರ್

ಏನಿದು ಪ್ರಕರಣ:ಕಳೆದ ಶುಕ್ರವಾರ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಹೆಚ್. ಡಿ ಕೋಟೆ ತಾಲೂಕಿನ‌ ಸರಗೂರು ಗ್ರಾಮಸ್ಥರು ಬಂದಿದ್ದರು.

ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗ್ತಿದೆ.

ಓದಿ:ದಲಿತರ ಮನೆಗೆ ನುಗ್ಗಿ ದಾಂಧಲೆ, ಹಲ್ಲೆ: ದೂರು ನೀಡಿದರೂ ಕ್ರಮಕೈಗೊಳ್ಳದ ಆರೋಪ

Last Updated : Nov 21, 2022, 5:14 PM IST

ABOUT THE AUTHOR

...view details