ಕರ್ನಾಟಕ

karnataka

ETV Bharat / state

ಸಂಪೂರ್ಣ ಲಾಕ್​​ಡೌನ್ ಜಾರಿ ಇದ್ದರೂ ಅನಗತ್ಯ ಸಂಚಾರ - ನಾಲ್ಕು ದಿನಗಳ ಬಂದ್

ಜಿಲ್ಲಾದ್ಯಂತ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​​​ ಜಾರಿ ಇದ್ದರೂ ಅನಗತ್ಯ ಸಂಚಾರಿಗಳ ಓಡಾಟ ಮಾತ್ರ ಕೊಳ್ಳೇಗಾಲದಲ್ಲಿ ಜಾಸ್ತಿಯಾದಂತೆ ಕಾಣುತ್ತಿದೆ.

 Unnecessary traffic in chamarajanagar
Unnecessary traffic in chamarajanagar

By

Published : May 21, 2021, 8:08 PM IST

Updated : May 21, 2021, 8:54 PM IST

ಕೊಳ್ಳೇಗಾಲ: ಕೊರೊನಾ ಹರಡುವಿಕೆಯ ನಿಯಂತ್ರಣಕ್ಕೆ ಗುರುವಾರ ದಿಂದ‌ ಭಾನುವಾರ ದವರೆಗೂ ಜಿಲ್ಲಾದ್ಯಂತ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​​​ ಜಾರಿಯಿದ್ದರೂ ಅನಗತ್ಯ ಸಂಚಾರಿಗಳ ಓಡಾಟ ಮಾತ್ರ ಕೊಳ್ಳೇಗಾಲದಲ್ಲಿ ಜಾಸ್ತಿಯಾದಂತೆ ಕಾಣುತ್ತಿದೆ.

ಇದ‌ನ್ನು ನೋಡಿ‌ ಎಚ್ಚೆತ್ತ ಪೊಲೀಸರು, ರಸ್ತೆಗಳಲ್ಲಿ ನಿಂತು ಅನಗತ್ಯವಾಗಿ ಓಡಾಡುವ ಬೈಕ್ ಸವಾರರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ.

ನಾಲ್ಕು ದಿನಗಳ ಬಂದ್ ಜಾರಿಯಿದ್ದರೂ ಜನರು ಅಗತ್ಯ ಸೇವೆಯ ನೆಪವೊಡ್ಡಿ ಓಡಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಇಂದು ಪಿಎಸ್ಐ ಮಾದೇಗೌಡ ಸುರಕ್ಷಾ ಪಡೆಯಯೊಂದಿಗೆ ಸೇರಿ 30 ಕ್ಕೂ ಹೆಚ್ಚು ಬೈಕ್ ಸೆರೆ ಹಿಡಿದಿದ್ದು, ದಂಡ ಹಾಕಿದ್ದಾರೆ.

Last Updated : May 21, 2021, 8:54 PM IST

ABOUT THE AUTHOR

...view details