ಚಾಮರಾಜನಗರ: ಹನೂರು ತಾಲೂಕಿನ ಮೇಕೆದಾಟು ಪ್ರದೇಶಕ್ಕೆ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದರು. ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಸಂಬಂಧಿಸಿದ್ದು. ಆ ಯೋಜನೆ ಆಗಲೇಬೇಕು. ಮಾಡೇ ಮಾಡುತ್ತೇವೆ. ಸರ್ಕಾರ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ತಮಿಳುನಾಡಿಗೂ ವಿನಂತಿ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆಯಾದರೆ ಬೆಂಗಳೂರು, ಚಾಮರಾಜನಗರಕ್ಕೆ ನೆರವಾಗಲಿದೆ ಎಂದು ತಿಳಿಸಿದರು.
ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಟೈಗರ್ ರಿಸರ್ವ್(ಹುಲಿ ಸಂರಕ್ಷಿತ ಪ್ರದೇಶ) ಮಾಡುವುದು ಸಿಎಂ ತೀರ್ಮಾನ. ಅವರ ನಿಲುವೇ ಅಂತಿಮ. ಮಲೆಮಹದೇಶ್ವರ ವನ್ಯಜೀವಿಧಾಮ ಅನುಮೋದನೆಗೊಂಡು ರಾಜ್ಯ ಸರ್ಕಾರಕ್ಕೆ ಬಂದಿದೆ. ಸೋಮಣ್ಣ ಬೇಡ ಎನ್ನುವುದು, ನಾನು ಬೇಕು ಎನ್ನುವುದರಿಂದ ಏನು ಆಗಲ್ಲ. ಸಂಪುಟ ಸಭೆಯಲ್ಲಿ ಸಿಎಂ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದರು.