ಚಾಮರಾಜನಗರ/ಮಧುಮಲೈ: ತಾಯಿ ಕಳೆದುಕೊಂಡು ಅನಾಥವಾಗಿದ್ದ ಎರಡು ಮರಿ ಹುಲಿಗಳನ್ನು ರಕ್ಷಿಸಿರುವ ಘಟನೆ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ಸಿಂಗಾರಾ ಎಂಬಲ್ಲಿ ನಡೆದಿದೆ.
ಶುಕ್ರವಾರವಷ್ಟೇ ಹೆಣ್ಣು ಹುಲಿಯೊಂದು ಅಸಹಜವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿತ್ತು. ಸಾವಿನ ತನಿಖೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿದ ವೇಳೆ ಎರಡು ಗಂಡು ಹುಲಿ ಮರಿಗಳು ಪತ್ತೆಯಾಗಿವೆ. ತಾಯಿಯನ್ನು ಕಳೆದುಕೊಂಡು ಕಂಗಲಾಗಿದ್ದ ಮರಿಗಳ ಆರೈಕೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.