ಚಾಮರಾಜನಗರ:ಶೋಕಿಗಾಗಿ ಮನೆಗೆ ಕನ್ನ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ: ಶೋಕಿಗಾಗಿ ವೃದ್ಧೆ ಮನೆಗೆ ಕನ್ನ ಹಾಕಿದ ಇಬ್ಬರು ಆರೋಪಿಗಳ ಬಂಧನ - two theft arrested in gundlupete
ಅಕ್ಟೋಬರ್ 3ರಂದು ಗುಂಡ್ಲುಪೇಟೆಯ ನಾಯಕರ ಬೀದಿಯಲ್ಲಿ ವಾಸವಿದ್ದ ಬಸಮ್ಮ (70) ಎಂಬ ವೃದ್ಧೆಯ ಮನೆಗೆ ಕನ್ನ ಹಾಕಿ, ಬೀರುವಿನಲ್ಲಿದ್ದ ಸುಮಾರು 60 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರು.
ಗುಂಡ್ಲುಪೇಟೆ: ಶೋಕಿಗಾಗಿ ವೃದ್ಧೆ ಮನೆಗೆ ಕನ್ನ, ಇಬ್ಬರು ಆರೋಪಿಗಳ ಬಂಧನ
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮನು ಅಲಿಯಾಸ್ ಕುಳ್ಳ (21), ಕಿರಣ್ (20) ಬಂಧಿತ ಆರೋಪಿಗಳು. ಅಕ್ಟೋಬರ್ 3ರಂದು ಗುಂಡ್ಲುಪೇಟೆಯ ನಾಯಕರ ಬೀದಿಯಲ್ಲಿ ವಾಸವಿದ್ದ ಬಸಮ್ಮ (70) ಎಂಬ ವೃದ್ಧೆಯ ಮನೆಗೆ ಇವರು ಕನ್ನ ಹಾಕಿದ್ದರು. ಬೀರುವಿನಲ್ಲಿದ್ದ ಓಲೆ, ಕಾಸು, ಚಿನ್ನದ ಉಂಗುರ ಸೇರಿದಂತೆ 60 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರು.
ಈ ಸಂಬಂಧ 6ರಂದು ವೃದ್ಧೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಇಂದು ಆರೋಪಿಗಳನ್ನು ಬಂಧಿಸಿ 60 ಗ್ರಾಂ ಚಿನ್ನಾಭರಣ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.