ಚಾಮರಾಜನಗರ:ಗಿರಿಜನ ಹಾಸ್ಟೆಲ್ನಿಂದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಗಿರಿಜನ ಹಾಸ್ಟೆಲ್ ನಿಂದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ - ಚಾಮರಾಜನಗರ ವಿದ್ಯಾರ್ಥಿನಿಯರು ನಾಪತ್ತೆ ಸುದ್ದಿ
ಚಾಮರಾಜನಗರ ಜಿಲ್ಲೆಯಲ್ಲಿನ ಗಿರಿಜನ ಹಾಸ್ಟೆಲ್ ನಿಂದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ.
ತಾಲೂಕಿನ ಕೆ.ಗುಡಿಯ ಜಡೇಗೌಡ ಎಂಬುವರ ಪುತ್ರಿ ಪುಷ್ಮಾಲೆ(15), ಕೊಳ್ಳೇಗಾಲ ತಾಲೂಕಿನ ಅಡಿಪಾಳ್ಯದ ಕೃಷ್ಣ ಎಂಬುವರ ಪುತ್ರಿ ಐಶ್ವರ್ಯ (15) ನಾಪತ್ತೆಯಾದವರು. ಬುಧವಾರ ಬೆಳಗ್ಗೆ ತಿಂಡಿ ತಿಂದು ಹೋದವರು ತಡರಾತ್ರಿಯಾದರೂ ಹಿಂತಿರುಗದಿದ್ದರಿಂದ ಸಹಪಾಠಿಗಳು ಗಾಬರಿಗೊಂಡು ಹಾಸ್ಟೆಲ್ ವಾರ್ಡನ್ಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ವಿದ್ಯಾರ್ಥಿನಿಯರು ಬಾಲಮಂದಿರದಿಂದ ಸರ್ಕಾರಿ ಪ್ರೌಢಶಾಲೆಗೆ ದಾಖಲಾಗಿ ಗಿರಿಜನ ವಸತಿನಿಲಯದಲ್ಲಿದ್ದರು ಎಂದು ತಿಳಿದುಬಂದಿದೆ. ಇನ್ನು, ಪಟ್ಟಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿದ್ಯಾರ್ಥಿನಿಯರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.