ಚಾಮರಾಜನಗರ: ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆಯಲ್ಲಿ ನಡೆದಿದೆ.
ಈಜು ಬಾರದೆ ಕೆರೆಗಿಳಿದ ಬಾವ-ಬಾಮೈದ ನೀರುಪಾಲು! - undefined
ಈಜಲು ಹೋಗಿದ್ದ ಇಬ್ಬರು ಉತ್ತೂರು ಕೆರೆಯಲ್ಲಿ ನೀರುಪಾಲು. ಶವಕ್ಕಾಗಿ ಶೋಧ ನಡೆಸುತ್ತಿರುವ ತೆರಕಣಾಂಬಿ ಪೊಲೀಸರು.

ಭಾವ-ಭಾಮೈದುನ ನೀರುಪಾಲು
ತೆರಕಣಾಂಬಿಯ ಪುಟ್ಟಸ್ವಾಮಿ ಎಂಬವರ ಅಳಿಯ ತಮಿಳ್(29) ಹಾಗೂ ಪುಟ್ಟಸ್ವಾಮಿಯ ಮಗ ನಂದೀಶ್(23) ಮೃತರು. ಮೃತ ತಮಿಳ್ ಹಾಗೂ ನಂದೀಶ್ ಭಾವ-ಭಾಮೈದುನರಾಗಿದ್ದು ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಸ್ನೇಹಿತರೊಂದಿಗೆ ಸ್ನಾನ ಮಾಡಲು ನೀರಿಗಿಳಿದ ನಂದೀಶ್ ಹಾಗೂ ತಮಿಳ್ ಈಜು ಬಾರದೇ ಮೃತಪಟ್ಟಿದ್ದು ಅಗ್ನಿಶಾಮಕ ದಳ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.