ಕೊಳ್ಳೇಗಾಲ: ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಒಂದೇ ಕುಟುಂಬದ ಇಬ್ಬರು ಸದಸ್ಯರು ತಿಂಗಳು ತುಂಬುವಷ್ಟರಲ್ಲಿಯೇ ಕೊರೊನಾಕ್ಕೆ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇಲ್ಕಡಹಳ್ಳಿ ಗ್ರಾಮದಲ್ಲಿ ಇಂಥ ಮನಕಲಕುವ ಘಟನೆ ನಡೆದಿದೆ. ಚಿಕ್ಕಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು (32) 15 ದಿನಗಳ ಹಿಂದಷ್ಟೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ನೋವಿನ ಸೂತಕ ವ್ಯಾಪಿಸಿತ್ತು. ಅದಾದ ನಂತರ ಅವರ ದೊಡ್ಡಪ್ಪ ನಿವೃತ್ತ ಪ್ರಾಂಶುಪಾಲರು ಹಾಗೂ ಹನೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ(70)ಇದೀಗ ಕೊರೊನಾದಿಂದ ಅಸುನೀಗಿದ್ದಾರೆ. ಮನೆಯಲ್ಲಿ ಒಬ್ಬರಾದ ಮೇಲೊಬ್ಬರ ಸಾವಿನಿಂದ ಸ್ಮಶಾನ ಮೌನ ಆವರಿಸಿದೆ.