ಚಾಮರಾಜನಗರ: ನವಜಾತ ಶಿಶುಗಳನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗುವ ನಿರ್ದಯಿ ತಾಯಂದಿರು ಅಲ್ಲಲ್ಲಿ ಕಂಡುಬರುತ್ತಾರೆ. ಜಿಲ್ಲೆಯಲ್ಲೂ ತಾಯಿಯೋರ್ವಳು ತಮ್ಮ ಕಂದನನ್ನು ಹುಟ್ಟಿದ ಎರಡೇ ದಿನದಲ್ಲಿ ಕಸದ ರಾಶಿಗೆ ಹಾಕಿದ್ದರು. ಆದ್ರೆ ಮಗು ಬಿಟ್ಟು ಹೋದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಘಟನೆಯೇನೂ ಸುಖಾಂತ್ಯ ಕಂಡಿಲ್ಲ.
ಹೌದು, ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ. ಮಗು ಕಂಡು ಹೌಹಾರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುವಾಗ ತಾಯಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. 'ನಾನೇ ಆ ಮಗುವಿನ ತಾಯಿ. ಮಗುವನ್ನು ಬಿಟ್ಟು ಹೋಗಿದ್ದು ನಾನೇ ಎಂದು ಅಲವತ್ತುಕೊಂಡಿದ್ದಾರೆ. ನನಗೆ ಮದುವೆ ಆಗಿದ್ದು, ಗಂಡ ಬಿಟ್ಟು ಹೋಗಿದ್ದಾನೆ. ಮಗು ಸಾಕುವ ಆಸಕ್ತಿ ಇಲ್ಲವೆಂದು' ಆ ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.