ಚಾಮರಾಜನಗರ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೇಚಣ್ಣ ಎಂಬುವವರ ಮಕ್ಕಳಾದ ಪೂಜಿತಾ (14) ಹಾಗೂ ಪುಣ್ಯ(13) ಮೃತ ಸಹೋದರಿಯರು.
ಸೀಬೆ ಹಣ್ಣು ಕೀಳಲು ಹೋಗಿ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವು
ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ರೇಚಣ್ಣ ಅವರು ಜಮೀನು ಮನೆಯಲ್ಲಿ ವಾಸವಿದ್ದು, ಕಾರ್ಯ ನಿಮಿತ್ತ ಮನೆಯವರೊಂದಿಗೆ ಹೊರಗಡೆ ತೆರಳಿದ್ದರಂತೆ. ಮನೆಯಲ್ಲಿ ಅಜ್ಜಿ ಮಾಡಿಕೊಟ್ಟ ತಿಂಡಿ ತಿಂದು ಇಬ್ಬರು ಬಾಲಕಿಯರು ಸೀಬೆಹಣ್ಣು ಕೀಳಲು ತೆರಳಿದ್ದಾರೆ. ಈ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಿಂದ ಮೇಲೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಾಲಕಿಯರ ಶವಗಳನ್ನು ಮೇಲಕ್ಕೆತ್ತಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನವ ವಿವಾಹಿತನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ಕಾರಣ ನಿಗೂಢ!