ಕರ್ನಾಟಕ

karnataka

ETV Bharat / state

ಚಾಮರಾಜನಗರ: ಕದ್ದ ಬೈಕ್​ಗಳ ಮಾರಾಟ, ಇಬ್ಬರ ಬಂಧನ - ಬೈಕ್​ ಕಳ್ಳತನ

ಬೈಕ್​ಗಳನ್ನು ಕದ್ದು ಮಾರಾಟ ಮಾಡಲು ಮುಂದಾದ ಇಬ್ಬರು ಕಳ್ಳರನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.

bike thieves arrested in chamarajanagara
ಚಾಮರಾಜನಗರದಲ್ಲಿ ಬೈಕ್​ ಕಳ್ಳರು ಅರೆಸ್ಟ್

By

Published : Feb 18, 2022, 7:11 AM IST

ಚಾಮರಾಜನಗರ: ಕದ್ದ ಬೈಕ್​ಗಳಲ್ಲಿ ಜಾಲಿ ಸವಾರಿ ಮಾಡುತ್ತಾ, ಗಿರಾಕಿ ಸಿಕ್ಕಿದರೆ ಮಾರಾಟ ಮಾಡಲೆತ್ನಿಸುವ ಮಂಡ್ಯದ ಇಬ್ಬರು ಆರೋಪಿಗಳನ್ನು ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ಹರೀಶ್(23) ಹಾಗೂ ವೆಂಕಟೇಶ್(19) ಬಂಧಿತರು. ಸಂತೇಮರಹಳ್ಳಿ ಸಿಪಿಐ ಮಹೇಶ್ ಹಾಗೂ ಪಿಎಸ್ಐ ತಾಜುದ್ದಿನ್ ಅವರು ಗಸ್ತು ತಿರುಗುವಾಗ ಇವರಿಬ್ಬರ ಮೇಲೆ ಅನುಮಾನ ಬಂದಿದ್ದು, ವಿಚಾರಿಸಿದ್ದಾರೆ. ಈ ವೇಳೆ ಕೃತ್ಯ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಲಂಚಕ್ಕೆ ಡಿಮ್ಯಾಂಡ್: ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ!

ಮಳವಳ್ಳಿ ಹಾಗೂ ಬನ್ನೂರಿನಲ್ಲಿ ಕದ್ದ ಎರಡು ಬೈಕ್​ಗಳನ್ನು ಸಂತೇಮರಹಳ್ಳಿ ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details