ಕೊಳ್ಳೇಗಾಲ: ಹುಲಿ ಉಗುರು ಮಾರಾಟಕ್ಕಿಳಿದಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ದೊಡ್ಡ ನಾಯಕರ ಬೀದಿ ನಿವಾಸಿ ಆಟೋ ಚಾಲಕ ನಾರಾಯಣಿ (33) ಹಾಗೂ ಹೊಸ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಯೀಮ್ ಪಾಷಾ (34) ಬಂಧಿತ ಆರೋಪಿಗಳು.

ಅರಣ್ಯ ಸಂಚಾರಿ ದಳ ಪಿಎಸ್ಐ ಮುದ್ದು ಮಾದೇವ ತಂಡ ಬೇರೆ ಪ್ರಕರಣದ ಸಂಬಂಧ ಮಾಹಿತಿಗಾಗಿ ಪಟ್ಟಣದ ಅಣಗಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಜೀಪ್ ಎದುರು ಸಿಕ್ಕ ಆಟೋವನ್ನು ಗಮನಿಸಿದ್ದಾರೆ. ಇದೇ ವೇಳೆ ಆಟೋದಲ್ಲಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ನೋಡಿ ಓಡಲು ಮುಂದಾಗಿದ್ದಾರೆ. ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಿಸಿದಾಗ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿರುವುದು ಕಂಡುಬಂದಿದೆ.
ಪರೀಶೀಲನೆ ವೇಳೆ ಬಂಧಿತ ಆರೋಪಿ ನಯೀಮ್ ಪಾಷಾನ ಹತ್ತಿರ ಎರಡು ಹುಲಿ ಉಗುರುಗಳು ದೊರಕಿವೆ. ಇದು ನನ್ನದಲ್ಲ, 3 ತಿಂಗಳಿನ ಹಿಂದೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯಿಂದ ಡಾಲರ್ ಮಾಡಿಸಿಕೊಳ್ಳಲು ಹುಲಿ ಉಗುರು ಖರೀದಿ ಮಾಡಿದ್ದೆ. ಆದ್ರೆ ಹಣದ ಸಮಸ್ಯೆ ಎದುರಾದ ಕಾರಣ ಅಣಗಳ್ಳಿ ಬಳಿ ಮಾರಾಟಕ್ಕೆ ಮುಂದಾದೆ ಎಂದು ನಾರಾಯಣಿ ಒಪ್ಪಿಕೊಂಡಿದ್ದಾನೆ.
ಬಂಧಿತರಿಂದ 1 ಆಟೋ, 2 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಕಾರ್ಯಾಚರಣೆ ವೇಳೆ ಮುಖ್ಯ ಪೇದೆ ಗುರುಸ್ವಾಮಿ, ಲೋಕೇಶ್, ಕುಮಾರಸ್ವಾಮಿ, ಜಯಶಂಕರ್, ಜಾಫರ್ ಇದ್ದರು.