ಕರ್ನಾಟಕ

karnataka

ETV Bharat / state

ಚಾಮರಾಜನಗರ: ಗಾಂಜಾ ಮಾರುತ್ತಿದ್ದ ಮಹಿಳೆ ಅಂದರ್​ - ಯುವಕನಿಗೆ ಚಾಕು ಇರಿತ! - chamarajanagara ganja cases

ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪರಾಧ ಪ್ರಕರಣಗಳು ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

chamarajanagara crime cases accused arrested
ಗಾಂಜಾ ಪ್ರಕರಣದ ಆರೋಪಿ ಅರೆಸ್ಟ್

By

Published : Jun 10, 2022, 2:31 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಯುವಕನಿಗೆ ಚಾಕು ಇರಿದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಹನೂರು ತಾಲೂಕಿನ‌ ಗುಂಡಿ‌ಮಾಳ ಗ್ರಾಮದ ತನ್ನ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಸಿಇಎನ್ ಹಾಗೂ ಹನೂರು ಪೊಲೀಸರು ಬಂಧಿಸಿದ್ದಾರೆ. ಶಶಿಕಲಾ ಬಂಧಿತ ಆರೋಪಿ‌. ಆರೋಪಿಯಿಂದ ಒಣ ಗಾಂಜಾ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯುವಕನಿಗೆ ಚಾಕು ಇರಿತ: ಪ್ರೀತಿ ಎಂದು ಬಾಲಕಿ ಹಿಂದೆ ಹೋದ ಯುವಕನಿಗೆ ಬಾಲಕಿ ಸೋದರ ಸಂಬಂಧಿಗಳು ಚಾಕು ಇರಿದಿರುವ ಘಟನೆ ಹನೂರು ತಾಲೂಕಿನ‌ ಪುಷ್ಪಾಪುರ ಗ್ರಾಮದಲ್ಲಿ ನಡೆದಿದೆ. ಮಂಚಾಪುರ ಗ್ರಾಮದ ನವೀನ್(24) ಚಾಕು ಇರಿತಕ್ಕೊಳಗಾದ ಯುವಕ. ಪ್ರೀತಿಸುವಂತೆ‌ ಅಪ್ರಾಪ್ತೆಗೆ ನವೀನ್ ಪೀಡಿಸುತ್ತಿದ್ದ ಎನ್ನಲಾಗಿದೆ.

ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದಿದ್ದರಿಂದ ಬಾಲಕಿ ಸಹೋದರ ಸಂಬಂಧಿಗಳಾದ ಆಕಾಶ್, ಶಿವಪ್ಪ ಹಾಗೂ ಗಣೇಶ್ ಎಂಬವವರು ನವೀನ್​ಗೆ ಚಾಕು ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ನವೀನ್​ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರು ಗಣೇಶ್ ಎಂಬಾತನನ್ನು ಬಂಧಿಸಿದ್ದಾರೆ‌. ಆಕಾಶ್ ಮತ್ತು ಶಿವಪ್ಪ ಪರಾರಿಯಾಗಿದ್ದಾರೆ.‌‌ ಹನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೆ ಆ್ಯಸಿಡ್​ ದಾಳಿ ಪ್ರಕರಣ: ಆರೋಪಿ ಬಂಧನ, ಆಸ್ಯಿಡ್​ ಬ್ಯಾನ್​ಗೆ ಮುಂದಾದ ಗೃಹ ಸಚಿವರು

ABOUT THE AUTHOR

...view details