ಚಾಮರಾಜನಗರ:ಬೀದರ್‌ನ ಔರಾದ್‌ನಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಅವಳಿ ಸಹೋದರರು ಸೈಕಲ್ ಯಾತ್ರೆ ಕೈಗೊಂಡಿದ್ದು, ಈಗಾಗಲೇ ಹನೂರು ತಾಲೂಕಿನ ಕೌದಳ್ಳಿ ತಲುಪಿದ್ದಾರೆ.
75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಬೀದರ್‌ನಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೆ ಔರಾದ್ ತಾಲೂಕಿನ ಕೊಳ್ಳೂರು ಗ್ರಾಮದ ಅರುಣ್ ಹಾಗೂ ಕರಣ್ ಎಂಬ ಅವಳಿ ಸಹೋದರರು ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿ ನಮನ ಸಲ್ಲಿಸುವ ಸದುದ್ದೇಶದಿಂದ ಈ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ.