ಕರ್ನಾಟಕ

karnataka

ETV Bharat / state

ಬಂಡೀಪುರ ಸಿಎಫ್ಒ ವಿರುದ್ಧ ಆದಿವಾಸಿಗಳ ಆಕ್ರೋಶ: ಸಚಿವರ ಮುಂದೆಯೇ ಮಹಿಳೆಯರ ತರಾಟೆ - ಬಂಡೀಪುರ ಸಿಎಫ್ಒ ವಿರುದ್ಧ ಆದಿವಾಸಿಗಳ ಆಕ್ರೋಶ

ಇಂದು ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗಿರಿಜನ ಕಾಲೋನಿಯಲ್ಲಿರುವ ಹಾಡಿಗೆ ಭೇಟಿ ನೀಡಿದ್ದರು. ಈ ವೇಳೆ, ಆದಿವಾಸಿ ಮಹಿಳೆಯರು ಬಂಡೀಪುರ ಸಿಎಫ್ಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

Tribal people outrage against Bandipur CFO officer infront of Ministers
ಬಂಡೀಪುರ ಸಿಎಫ್ಒ ವಿರುದ್ಧ ಆದಿವಾಸಿಗಳ ಆಕ್ರೋಶ

By

Published : Aug 26, 2021, 5:04 PM IST

ಚಾಮರಾಜನಗರ:ಅರಣ್ಯ ಸಚಿವ ಉಮೇಶ್ ಕತ್ತಿ ಗಿರಿಜನ ಹಾಡಿಗೆ ಭೇಟಿ ನೀಡಿದ್ದ ವೇಳೆ ಆದಿವಾಸಿ ಮಹಿಳೆಯರು ಬಂಡೀಪುರ ಸಿಎಫ್ಒ ವಿರುದ್ಧ ಆಕ್ರೋಶ ಹೊರ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗಿರಿಜನ ಕಾಲೋನಿಯಲ್ಲಿ ನಡೆದಿದೆ‌.

ಬಂಡೀಪುರ ಸಿಎಫ್ಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆದಿವಾಸಿಗಳು

ಅರಣ್ಯ ಸಚಿವರೊಂದಿಗೆ ಅಳಲು ತೋಡಿಕೊಂಡ ಆದಿವಾಸಿ ಮಹಿಳೆಯರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 205 ದಿನಗೂಲಿ ನೌಕರರನ್ನು ಸಿಎಫ್ಒ ನಟೇಶ್ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದ್ದಾರೆ. ನೌಕರಿ ಬಿಡಲಾಗದೇ ಅಲ್ಲಿ ಕರ್ತವ್ಯ ನಿರ್ವಹಿಸಲಾಗದೆ ಇಕ್ಕಟ್ಟಿಗೆ ಸಿಲುಕಿದ್ದೇವೆ ಎಂದು ಕಿಡಿಕಾರಿದರು.

ಆದಿವಾಸಿಗಳಿಂದಲೇ ಕಾಡು ಉಳಿದಿರೋದು

ನಟೇಶ್ ಅವರನ್ನು ಸುತ್ತುವರಿದ ಮಹಿಳೆಯರು, ಆದಿವಾಸಿಗಳಿದ್ದರೆ ಕಾಡು ಉಳಿಯುವುದು ಎಂಬುದನ್ನು ಮರೆಯಬೇಡಿ. 12 ಸಾವಿರ ರೂ. ವೇತನ ಕೊಟ್ಟು 60-70 ಕಿಮೀ ದೂರದೂರಿಗೆ ವರ್ಗಾವಣೆ ಮಾಡಿದರೆ ಜೀವನ ಮಾಡುವುದು ಹೇಗೆ?, ನೌಕರರು ಮನೆ ನಡೆಸುವುದು ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವರೊಟ್ಟಿಗೂ ವಾಗ್ದಾದ ನಡೆಸಿದ ಮಹಿಳೆಯರು, ನಾವು ಇರುವುದರಿಂದಲೇ ಕಾಡು ಉಳಿದಿದೆ. ನಮ್ಮನ್ನು ದೂರ ತಳ್ಳಿದರೆ ಅರಣ್ಯ ಉಳಿಯಲು ಸಾಧ್ಯವೇ, ಗಿರಿಜನರಿಗೆ ಮಾನಸಿಕ ಹಿಂಸೆ ಕೊಡಬೇಕೆಂದು ನಟೇಶ್ ಅವರು ದಿನಗೂಲಿ ನೌಕರರನ್ನು 50 - 60 ಕಿಮೀ ದೂರದೂರುಗಳಿಗೆ ವರ್ಗಾವಣೆ ಮಾಡಿದ್ದಾರೆ.

ವಿಭಾಗದಿಂದ ವಿಭಾಗಕ್ಕೆ ವರ್ಗಾಯಿಸಿರುವುದು ಸರಿಯಲ್ಲ. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಸಚಿವರಿಗೆ ಒತ್ತಾಯಿಸಿದರು. ಮಧ್ಯಾಹ್ನ ಅಧಿಕಾರಿಗಳ ಜೊತೆ ಸಭೆ ಕರೆದಿದ್ದು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 205 ಮಂದಿ ದಿನಗೂಲಿ ನೌಕರರನ್ನು ಸಿಎಫ್ಒ ನಟೇಶ್ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ದಿನಗೂಲಿ ನೌಕರರಷ್ಟೇ ಅಲ್ಲದೇ ಕೆಲ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಓದಿ: Mysore Gangrape Case: ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹೋಗಬಾರದಿತ್ತು ಎಂದ ಗೃಹ ಸಚಿವ ಜ್ಞಾನೇಂದ್ರ!

ABOUT THE AUTHOR

...view details